ಸಮವಸ್ತ್ರ ವಿವಾದ: ಮುಂದಿನ 3 ದಿನಗಳ ಕಾಲ ಪ್ರೌಢ ಶಾಲಾ ಕಾಲೇಜುಗಳಿಗೆ ರಜೆ - Mahanayaka

ಸಮವಸ್ತ್ರ ವಿವಾದ: ಮುಂದಿನ 3 ದಿನಗಳ ಕಾಲ ಪ್ರೌಢ ಶಾಲಾ ಕಾಲೇಜುಗಳಿಗೆ ರಜೆ

hijab kesari bommai
08/02/2022


Provided by

ಬೆಂಗಳೂರು: ಸಮವಸ್ತ್ರ ವಿವಾದಕ್ಕೆ  ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮುಂದಿನ ಮೂರು ದಿನಗಳ ಕಾಲ ಎಲ್ಲ ಪ್ರೌಢ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಎಲ್ಲ ಶಾಲಾ, ಕಾಲೇಜು ಆಡಳಿತ ಸಮಿತಿಗಳು ಹಾಗೂ ರಾಜ್ಯದ ಜನತೆ ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ  ಮನವಿ ಮಾಡಿದ್ದಾರೆ.

ಇನ್ನೂ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ  ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಇಂದು ಸರ್ಕಾರದ ಪರ ಹಾಗೂ ಅರ್ಜಿದಾರರ ಪರ ವಕೀಲರ ಕಡೆಯಿಂದ ವಾದ ವಿವಾದ ಆಲಿಸಿದ ನ್ಯಾ.ಕೃಷ್ಣ ದೀಕ್ಷಿತ್, ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 2:30ಕ್ಕೆ ಮುಂದೂಡಿದ್ದಾರೆ.

ಹಿಜಾಬ್ ವಿಚಾರವಾಗಿ ರಾಜ್ಯದ ಹಲವು ಶಿಕ್ಷಣ ಸಂಸ್ಥೆ, ಕಾಲೇಜುಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಯಾವುದೇ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ್ದು ಎಂದು ನ್ಯಾಯಾಲಯ ಸೂಚನೆ ನೀಡಿದೆ. ಇದರ ಬೆನ್ನಲ್ಲೇ 3 ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ: ಮದ್ರಸ ಅಧ್ಯಾಪಕ ಅರೆಸ್ಟ್

ಪ್ರತಿಭಟನೆಯ ಬಳಿಕ ಕೇಸರಿ ಪೇಟ ರಾಶಿ ಹಾಕುತ್ತಿರುವ ದೃಶ್ಯ ವೈರಲ್!

ಹಿಜಬ್ ಹಾಕಿಕೊಂಡು ಅಧಿವೇಶನಕ್ಕಲ್ಲ ಮೊದಲು ಮಸೀದಿಗೆ ಹೋಗಿ: ಸಚಿವ ಈಶ್ವರಪ್ಪ

ಕಾಲೇಜಿನ ಧ್ವಜಸ್ತಂಭದಲ್ಲಿ ಕೇಸರಿ ಬಾವುಟ ಹಾರಿಸಿದ ವಿದ್ಯಾರ್ಥಿಗಳು!

ಶಾಲಾ ಬಾಲಕಿಗೆ ಆನ್‍ಲೈನ್‍ ನಲ್ಲಿ ಲೈಂಗಿಕ ಕಿರುಕುಳ: ಆರೋಪಿಯ ಬಂಧನ

ಇತ್ತೀಚಿನ ಸುದ್ದಿ