ಆರೋಪಿಯನ್ನು ಕರೆ ತರುತ್ತಿದ್ದಾಗ ಪೊಲೀಸ್‌ ವಾಹನ ಅಪಘಾತ: ಐವರು ಸಾವು - Mahanayaka

ಆರೋಪಿಯನ್ನು ಕರೆ ತರುತ್ತಿದ್ದಾಗ ಪೊಲೀಸ್‌ ವಾಹನ ಅಪಘಾತ: ಐವರು ಸಾವು

accident
15/02/2022


Provided by

ಜೈಪುರ: ಆರೋಪಿಯೊಬ್ಬನನ್ನು ದೆಹಲಿಯಿಂದ ಗುಜರಾತ್‌ ಕರೆತರುತ್ತಿದ್ದ ಪೊಲೀಸ್ ವಾಹನವೊಂದು ಅಪಘಾತಕ್ಕೀಡಾಗಿದ್ದು, ನಾಲ್ವರು ಪೊಲೀಸರು ಸೇರಿದಂತೆ ಐದು ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

ದೆಹಲಿಯಿಂದ ಗುಜರಾತ್‌ ಆರೋಪಿಯನ್ನು ಕರೆತರುತ್ತಿದ್ದ ಗುಜರಾತ್ ಪೊಲೀಸರ ಫಾರ್ಚೂನರ್ ಕಾರು ಡಿವೈಡರ್ ಮೇಲೆ ಹರಿದು, ಮರಕ್ಕೆ ಡಿಕ್ಕಿ ಹೊಡೆದಿದೆ. ನಂತರ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ, ನಾಲ್ವರು ಪೊಲೀಸರು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ.

ಘಟನೆ ಭಬ್ರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಿಎಂ ಅಶೋಕ್ ಗೆಹ್ಲೋಟ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹುಟ್ಟಿ 6 ತಿಂಗಳಿಗೇ ಮೃತಪಟ್ಟ ಮಗು: ನೊಂದ ತಾಯಿ ಆತ್ಮಹತ್ಯೆಗೆ ಶರಣು

ಹಿರಿಯ ನಟಿ ಭಾರ್ಗವಿ ನಾರಾಯಣ ನಿಧನ

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಪಲ್ಟಿ: ಹಲವರಿಗೆ ಗಾಯ

ನಾನು ಹಿಜಾಬ್ ಬಗ್ಗೆ ಮಾತನಾಡ್ತೀನಿ: ಡಿ.ಕೆ.ಶಿವಕುಮಾರ್ ಸೂಚನೆ ತಿರಸ್ಕರಿಸಿದ ಜಮೀರ್

ಇತ್ತೀಚಿನ ಸುದ್ದಿ