ಬಾಲಕಿ ಮೇಲೆ 16 ಮಂದಿಯಿಂದ ಸಾಮೂಹಿಕ ಅತ್ಯಾಚಾರ - Mahanayaka

ಬಾಲಕಿ ಮೇಲೆ 16 ಮಂದಿಯಿಂದ ಸಾಮೂಹಿಕ ಅತ್ಯಾಚಾರ

rape
15/02/2022


Provided by

ರಾಜಸ್ಥಾನ: 13 ವರ್ಷ ಬಾಲಕಿಯನ್ನು ಅಪಹರಿಸಿ 16 ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ರಾಜಸ್ಥಾನದ ಭರತ್‍ಪುರದಲ್ಲಿ ಬೆಳಕಿಗೆ ಬಂದಿದೆ.

ಸಂತ್ರಸ್ತ ಅಪ್ರಾಪ್ತ ಬಾಲಕಿ ಫೆ.11ರಂದು ಮಧ್ಯಾಹ್ನ ಮೇಕೆ ಮೇಯಿಸಲು ಮತ್ತು ಕಟ್ಟಿಗೆ ತೆಗೆದುಕೊಳ್ಳಲು ಕಾಡಿಗೆ ತೆರಳಿದ್ದಳು. ಆ ವೇಳೆ ಗ್ರಾಮದ ಐವರು ಬಂದು ಸಂತ್ರಸ್ತೆಯನ್ನು ಅಪಹರಿಸಿದ್ದಾರೆ. ಬಳಿಕ ಬಾಲಕಿ ಮೇಲೆ 16 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಫೆ. 12ರಂದು ಸಂತ್ರಸ್ತೆ ಅವರ ಹಿಡಿತದಿಂದ ಬಿಡುಗಡೆಗೊಂಡಿದ್ದು, ತನ್ನ ಮನೆಗೆ ಬಂದಿದ್ದಾಳೆ. ಬಳಿಕ ನಡೆದ ಘಟನೆಯನ್ನು ತನ್ನ ತಂದೆಗೆ ತಿಳಿದ್ದಾಳೆ.

ಈ ಬಗ್ಗೆ ಸಂತ್ರಸ್ತೆಯ ತಂದೆ, ಪೊಲೀಸ್ ಠಾಣೆಯಲ್ಲಿ ತನ್ನ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು 16 ಜನರ ವಿರುದ್ಧ ದೂರು ನೀಡಿದ್ದು, ಪ್ರಸ್ತುತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಘಟನೆಯ ನಂತರ ಸ್ಥಳೀಯರು ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ 13 ವರ್ಷದ ಮಗಳನ್ನು ಕೆಲವರು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆಯ ತಂದೆ ದೂರು ದಾಖಲಿಸಿದ್ದಾರೆ ಎಂದು ಏರಿಯಾ ಸಿಒ ಆಶಿಶ್ ಕುಮಾರ್ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕುಡಿದ ಮತ್ತಿನಲ್ಲಿ ಮೊಬೈಲ್​ಗಾಗಿ ಜಗಳ: ಸ್ನೇಹಿತನ ಕೊಲೆಯಲ್ಲಿ ಅಂತ್ಯ

ಶಾಸಕ ಪ್ರಿಯಾಂಕ್‌ ಖರ್ಗೆ ಪತ್ನಿಯ ಮೊಬೈಲ್‌ ಕಳವು: ಇಬ್ಬರು ಆರೋಪಿಗಳ ಬಂಧನ

ಆರೋಪಿಯನ್ನು ಕರೆ ತರುತ್ತಿದ್ದಾಗ ಪೊಲೀಸ್‌ ವಾಹನ ಅಪಘಾತ: ಐವರು ಸಾವು

ಹುಟ್ಟಿ 6 ತಿಂಗಳಿಗೇ ಮೃತಪಟ್ಟ ಮಗು: ನೊಂದ ತಾಯಿ ಆತ್ಮಹತ್ಯೆಗೆ ಶರಣು

ಇತ್ತೀಚಿನ ಸುದ್ದಿ