13 ಅಪ್ರಾಪ್ತ ವಿದ್ಯಾರ್ಥಿನಿಯರ ಅತ್ಯಾಚಾರ: ಶಿಕ್ಷಕನಿಗೆ ಜೀವಾವಧಿ ಶಿಕ್ಷೆ - Mahanayaka
10:35 PM Tuesday 14 - October 2025

13 ಅಪ್ರಾಪ್ತ ವಿದ್ಯಾರ್ಥಿನಿಯರ ಅತ್ಯಾಚಾರ: ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

herry
16/02/2022

ಇಂಡೋನೇಷ್ಯಾ:  13 ಅಪ್ರಾಪ್ತ ವಯಸ್ಸಿನ  ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ.


Provided by

36 ವರ್ಷ ವಯಸ್ಸಿನ ಹೆರ್ರಿ ವಿರಾವನ್  ಅತ್ಯಾಚಾರ ಪ್ರಕರಣ ಅಪರಾಧಿಯಾಗಿದ್ದು, ಈತ ಸ್ಕ್ಯಾಪರ್ ಶಿಪ್ ಸೇರಿದಂತೆ ಇನ್ನಿತರ ಆಮಿಷ ಒಡ್ಡಿ ಬಡವರ ಮಕ್ಕಳನ್ನು ಇಂಡೋನೇಷ್ಯಾದ ಜಕಾರ್ತದ  ಧಾರ್ಮಿಕ ಬೋರ್ಡಿಂಗ್ ಶಾಲೆಗೆ ಸೇರಿಸಿಕೊಳ್ಳುತ್ತಿದ್ದ, ಬಳಿಕ ಬಾಲಕಿಯರನ್ನು ದುರ್ಬಳಕೆ ಮಾಡುತ್ತಿದ್ದ. ಓರ್ವಳು ಬಾಲಕಿಯ ಪೋಷಕರು ದೂರು ನೀಡಿದ ಬಳಿಕ ಈತನ ಇನ್ನುಳಿದ ಪ್ರಕರಣಗಳು ಕೂಡ ಬಯಲಾಗಿವೆ.

2016ರಿಂದ 2021ರ ನಡುವೆ 13ರಿಂದ 16 ವರ್ಷದೊಳಗಿನ ವಿದ್ಯಾರ್ಥಿನಿಯರ ಮೇಲೆ ಈತ ಅತ್ಯಾಚಾರ ನಡೆಸಿದ್ದು, ಈ ಪೈಕಿ 8 ವಿದ್ಯಾರ್ಥಿನಿಯರು ಗರ್ಭಿಣಿಯಾಗಿದ್ದಾರೆ. ಸಮಾಜದಲ್ಲಿರುವ ಕೊಳಕು ಮನಸ್ಥಿತಿಗಳಿಗೆ ಹೆದರಿ ಬಾಲಕಿಯರು ಹಾಗೂ ಅವರ ಪೋಷಕರು ಬಾಯಿಬಿಟ್ಟಿರಲಿಲ್ಲ.  ಕೆಲವು ವಿದ್ಯಾರ್ಥಿನಿಯರು ಮಗುವಿಗೆ ಜನ್ಮ ನೀಡಿದರೂ ವಿಚಾರವನ್ನು ಪಾಲಕರು ಬಹಿರಂಗಪಡಿಸಿರಲಿಲ್ಲ.

ಸಂತ್ರಸ್ತ ಬಾಲಕಿಯರ ಪೈಕಿ ಒಬ್ಬಾಕೆಯ ಪೋಷಕರು ಧೈರ್ಯ ಮಾಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಹೀಗಾಗಿ ಈತನ ಎಲ್ಲಾ ಕೃತ್ಯಗಳು ಬಯಲಾಗಿವೆ. ಇದೀಗ ಅಪರಾಧಿ ಹೆರ್ರಿಗೆ ಪಶ್ಚಿಮ ಜಾವಾದ ಬಂಡಂಗ್ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಆದರೆ, ಆತನಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆತ್ಮಹತ್ಯೆಗೆ ಯತ್ನಿಸಿದ ಪೊಲೀಸ್ ಪೇದೆ ಮತ್ತು ಪತ್ನಿ: ಪತ್ನಿಯ ದಾರುಣ ಸಾವು

ಪ್ರೇಮ ನಿವೇದನೆ ತಿರಸ್ಕರಿಸಿದ್ದಕ್ಕೆ ಹಾಡ ಹಗಲೇ ಯುವತಿಯ ಕತ್ತು ಸೀಳಿದ ಪಾಗಲ್ ಪ್ರೇಮಿ!

ನೀನು ಲೂಟಿಕೋರ ನನ್ಮಗ, ದೇಶದ್ರೋಹಿ: ಈಶ್ವರಪ್ಪ ವಿರುದ್ಧ ಗುಡುಗಿದ ಡಿ.ಕೆ.ಶಿವಕುಮಾರ್

ನಂದಿನಿ ನದಿಗೆ ಹಾರಿ ಇಂಜಿನಿಯರ್ ಆತ್ಮಹತ್ಯೆ

ಇತ್ತೀಚಿನ ಸುದ್ದಿ