ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಆರೋಪ: ಪಿ ಆರ್‌ ಓ ವಜಾಕ್ಕೆ ಆಗ್ರಹಿಸಿ ಧರಣಿ - Mahanayaka
10:08 PM Wednesday 15 - October 2025

ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಆರೋಪ: ಪಿ ಆರ್‌ ಓ ವಜಾಕ್ಕೆ ಆಗ್ರಹಿಸಿ ಧರಣಿ

protest
24/02/2022

ಕುಂದಾಪುರ: ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿರುವ ಆರೋಪದ ಹಿನ್ನಲೆಯಲ್ಲಿ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ತಕ್ಷಣ ವಜಾಗೊಳಿಸಲು ಆಗ್ರಹಿಸಿ ಕುಂದಾಪುರದ ಸಂಗಮ್‌ನಲ್ಲಿರುವ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಗುರುವಾರ ಧರಣಿ ನಡೆಸಿರುವ ಘಟನೆ ನಡೆದಿದೆ.


Provided by

ವಿದ್ಯಾರ್ಥಿನಿಯರಿಗೆ ರಾತ್ರಿ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಅಶ್ಲೀಲ ಸಂದೇಶ ಕಳಿಸುತ್ತಿರುವ ಆರೋಪವಿದ್ದು, ಈ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದರೂ ಶಿಸ್ತು ಕ್ರಮ ಜರುಗಿಸದ ಆಡಳಿತ ಮಂಡಳಿ ವಿರುದ್ದ ವಿದ್ಯಾರ್ಥಿಗಳು ಕಾಲೇಜು ಮುಂಭಾಗ ಧರಣಿ ನಡೆಸಿದ್ದಾರೆ.

ಪಿಆರ್‌ ಓ‌ ವಿರುದ್ದ ಧರಣಿನಿರತ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕುತ್ತಿರುವ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿ ಕಾಲೇಜು ಪ್ರಾಂಶುಪಾಲರು ಶಿಸ್ತುಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಆದರೆ ಪ್ರಾಂಶುಪಾಲರ ಭರವಸೆಗೆ ಜಗ್ಗದ, ವಿದ್ಯಾರ್ಥಿಗಳು ಧರಣಿ ಮುಂದುವರಿಸಿದ್ದು, ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಕಾಲೇಜು ಆಡಳಿತ‌ ಮಂಡಳಿ ಅಧ್ಯಕ್ಷರನ್ನು ಸ್ಥಳಕ್ಕೆ‌ ಕರೆಸಬೇಕೆಂದು ಪಟ್ಟು ಹಿಡಿದಿದ್ದಾರೆ.ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಧಾನಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರಿಯಕರನೊಂದಿಗೆ ವಿರಸ: ಫೋನ್ ​ನಲ್ಲಿ ಮಾತನಾಡುತ್ತಲೇ ನೇಣು ಬಿಗಿದು ಆತ್ಮಹತ್ಯೆಗೈದ ಯುವತಿ

ರಷ್ಯಾ ಶೆಲ್ ದಾಳಿಗೆ 7 ಮಂದಿ ಸಾವು, 9 ಮಂದಿಗೆ ಗಾಯ: ಉಕ್ರೇನ್

ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಪತ್ನಿ ಮೃತಪಟ್ಟಿದ್ದಾಳೆಂದು ರಸ್ತೆಬದಿಯಲ್ಲೇ ಎಸೆದು ಹೋದ ಪತಿ

‘ಓ ಅಂಟಾವಾ’ ಹಾಡನ್ನು ಹಾಡಿ ನೆಟ್ಟಿಗರ ಮನ ಗೆದ್ದ ಡಚ್​ ಮಹಿಳೆ

 

 

ಇತ್ತೀಚಿನ ಸುದ್ದಿ