ಮಹಿಳೆಯರ ಹೆಸರಿನಲ್ಲಿ ಅಶ್ಲೀಲ ಫೋಟೋ ಸಂಗ್ರಹಿಸಿ  ಯುವಕನಿಗೆ ವಂಚನೆ - Mahanayaka
6:00 AM Wednesday 22 - October 2025

ಮಹಿಳೆಯರ ಹೆಸರಿನಲ್ಲಿ ಅಶ್ಲೀಲ ಫೋಟೋ ಸಂಗ್ರಹಿಸಿ  ಯುವಕನಿಗೆ ವಂಚನೆ

25/11/2020

ಮಂಗಳೂರು: ನಕಲಿ ಫೇಸ್ ಬುಕ್ ಖಾತೆ ಬಳಸಿ ಮಹಿಳೆಯರ ಹೆಸರಿನಲ್ಲಿ ವ್ಯವಹರಿಸಿ ಅಶ್ಲೀಲ ಫೋಟೋಗಳನ್ನು ಸಂಗ್ರಹಿಸಿ  ಪೊಲೀಸ್ ಅಧಿಕಾರಿ ಸೋಗಿನಲ್ಲಿ  ಬ್ಲ್ಯಾಕ್ ಮೇಲ್ ಮಾಡುತ್ತಿದ್ದ  ಇಬ್ಬರು  ಆರೋಪಿಗಳನ್ನು  ಮಂಗಳೂರು  ಪೊಲೀಸರು ಬಂಧಿಸಿದ್ದಾರೆ.

ಬಂಧಿತ  ಆರೋಪಿಗಳು  ಬೆಂಗಳೂರಿನ  ಗೋಕುಲ್ ರಾಜ್(20) ಮತ್ತು ಪವನ್ (20)  ಎಂದು ಗುರುತಿಸಲಾಗಿದೆ. ಸಾಕ್ಷೀರಾಜ್ ಎಂಬ ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಸೃಷ್ಟಿಸಿ, ಮಂಗಳೂರಿನ ರಾಜೇಶ್ ಎಂಬವರೊಂದಿಗೆ ಸಂಪರ್ಕ ಸಾಧಿಸಿ,   ಫೇಕ್  ಅಶ್ಲೀಲ ಫೋಟೊಗಳನ್ನು ಕಳುಹಿಸಿ ನಂತರ ರಾಜೇಶ್ ಅವರಿಂದ ಫೋಟೊಗಳನ್ನು ಪಡೆದಿದ್ದರು. ನಂತರ ಆ ಫೋಟೊಗಳನ್ನು ಬಳಸಿ ಬೆದರಿಸಿ ಹಣ ಪಡೆದಿದ್ದರು.

ಇಷ್ಟಕ್ಕೆ ಸುಮ್ಮನಾಗದ  ಆರೋಪಿಗಳು, ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟರು . ಇದನ್ನು  ರಾಜೇಶ್ ನಿರಾಕರಿಸಿದಾಗ  ಆರೋಪಿಗಳು  ಹಿರಿಯ ಪೊಲೀಸ್  ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ವಂಚಿಸಿದ್ದಾರೆ. ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ  ರಾಜೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.  ದೂರು ಸ್ವೀಕರಿಸಿದ ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕ ಬಿ.ಸಿ.ಗಿರೀಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ

ಇತ್ತೀಚಿನ ಸುದ್ದಿ