ಒಂದೇ ದಿನ 81 ಮಂದಿಯನ್ನು ಗಲ್ಲಿಗೇರಿಸಿದ ಸೌದಿ ಅರೇಬಿಯಾ ಸರ್ಕಾರ! - Mahanayaka

ಒಂದೇ ದಿನ 81 ಮಂದಿಯನ್ನು ಗಲ್ಲಿಗೇರಿಸಿದ ಸೌದಿ ಅರೇಬಿಯಾ ಸರ್ಕಾರ!

saudi arabia
13/03/2022


Provided by

ರಿಯಾದ್: ಭಯೋತ್ಪಾದನೆಗೆ ಸಂಚು ರೂಪಿಸಿರುವುದು ಸೇರಿದಂತೆ ವಿವಿಧ ಅಪರಾಧಗಳ ಮೇಲೆ  ಸೌದಿ ಅರೇಬಿಯಾ ಸರ್ಕಾರವು 81 ಮಂದಿಯನ್ನು ಗಲ್ಲಿಗೇರಿಸಿದೆ ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ.

2021 ರಲ್ಲಿ ಜಾರಿಗೆ ತಂದಿದ್ದ ಮರಣದಂಡನೆಗಳಿಗಿಂತಲೂ ಈ ಬಾರಿ ಹೆಚ್ಚು ಜನರನ್ನು ಗಲ್ಲಿಗೇರಿಸಿರುವ ಸೌದಿ ಅರೇಬಿಯಾ, ಶಿಕ್ಷೆಗೊಳಗಾದವರು ಇಸ್ಲಾಮಿಕ್ ಸ್ಟೇಟ್, ಅಲ್-ಖೈದಾ, ಹೌತಿ ಮತ್ತು ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದವರಾಗಿದ್ದರು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದವರು ಹಾಗೂ ಶಸ್ತ್ರಾಸ್ತ್ರಗಳನ್ನು  ದೇಶದೊಳಗೆ ಕಳ್ಳ ಸಾಗಾಣೆ ಮಾಡಲು ಸಂಚು ರೂಪಿಸಿದವರು ಮರಣದಂಡನೆಗೊಳಗಾದವರು ಎಂದು ಹೇಳಲಾಗಿದೆ. ಸೌದಿಯಲ್ಲಿ 2021ರಲ್ಲಿ 67 ಜನರನ್ನು ಗಲ್ಲಿಗೇರಿಸಲಾಗಿತ್ತು. ಇದೀಗ ಬರೋಬ್ಬರಿ 81 ಮಂದಿಯನ್ನು ಗಲ್ಲಿಗೇರಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಿಕ್ಷಣ, ಪರಿಸರದ ಜಾಗೃತಿಗಾಗಿ 24 ಸಾವಿರ ಕಿ.ಮೀ. ಸೈಕಲ್ ಜಾಥಾ ಪೂರೈಸಿದ ಬೆಂಗಳೂರಿನ ಯುವಕರು

ಎಚ್.​​​​​​​​​ಡಿ.ಕುಮಾರಸ್ವಾಮಿಗೆ ಅಭಿಮಾನಿಯಿಂದ ಜೋಡೆತ್ತು ಉಡುಗೊರೆ

ಕೌಟುಂಬಿಕ ಕಲಹ: ಪತ್ನಿಯ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ

ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ: 60 ಗುಡಿಸಲು ಭಸ್ಮ, 7 ಮಂದಿ ಸಾವು

ಪಂಚರಾಜ್ಯ ಚುನಾವಣೆ: ಇವಿಎಂ ಹ್ಯಾಕ್ ಆಗಿರಬಹುದು; ಡಾ.ಜಿ.ಪರಮೇಶ್ವರ್

ಇತ್ತೀಚಿನ ಸುದ್ದಿ