ಬೊಲೆರೋ - ಟ್ರಕ್ ಮಧ್ಯೆ ಡಿಕ್ಕಿ: ಐವರು ಸಾವು, ನಾಲ್ವರಿಗೆ ಗಾಯ - Mahanayaka
9:06 AM Thursday 15 - January 2026

ಬೊಲೆರೋ – ಟ್ರಕ್ ಮಧ್ಯೆ ಡಿಕ್ಕಿ: ಐವರು ಸಾವು, ನಾಲ್ವರಿಗೆ ಗಾಯ

15/03/2022

ಬುಲ್ಡಾನ: ಬೊಲೆರೋ ಮತ್ತು ಟ್ರಕ್ ಡಿಕ್ಕಿ ಸಂಭವಿಸಿ, ಸ್ಥಳದಲ್ಲೇ ಐವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಖಮಗಾಂವ್-ಜಲ್ನಾ ರಸ್ತೆಯಲ್ಲಿ ನಡೆದಿದೆ.

ಖಮ್‌ಗಾಂವ್-ಜಲ್ನಾ ರಸ್ತೆಯ ದೇಲ್ಗಾಂವ್ ಬಳಿ ಬೊಲೆರೋ ಮತ್ತು ಟ್ರಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದು, ಅಪಘಾತದ ಭೀಕರತೆಗೆ ಬೊಲೆರೋದಲ್ಲಿದ್ದ ಪ್ರಯಾಣಿಕರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿ, ಇತರ ನಾಲ್ವರು ಗಾಯಗೊಂಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು. ಗಾಯಾಳುಗಳನ್ನು ದೇಲ್ಗಾಂವ್ ರಾಜಾ ಮತ್ತು ಜಲ್ನಾಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಇತ್ತೀಚಿನ ಸುದ್ದಿ