OTT ಗೆ ಸೆಲ್ಯೂಟ್;  ದುಲ್ಕರ್ ನಿರ್ಮಾಣ ಕಂಪನಿಯನ್ನು ಬ್ಯಾನ್ ಮಾಡಿದ ಫಿಯೋಕ್ - Mahanayaka

OTT ಗೆ ಸೆಲ್ಯೂಟ್;  ದುಲ್ಕರ್ ನಿರ್ಮಾಣ ಕಂಪನಿಯನ್ನು ಬ್ಯಾನ್ ಮಾಡಿದ ಫಿಯೋಕ್

dulquer salmaan
15/03/2022


Provided by

ಥಿಯೇಟರ್ ಮಾಲೀಕರ ಸಂಘಟನೆಯಾದ ಫಿಯೋಕ್ ದುಲ್ಕರ್ ಅವರ ನಿರ್ಮಾಣ ಸಂಸ್ಥೆ  ವೇಫರರ್  ಫಿಲ್ಮ್ಸ್  ಅನ್ನು ನಿಷೇಧಿಸಿದೆ.  ದುಲ್ಕರ್ ಸಲ್ಮಾನ್ ಅಭಿನಯದ ವೇಫರರ್ ಫಿಲ್ಮ್ಸ್  ನಿರ್ಮಾಣದ ‘ಸೆಲ್ಯೂಟ್’ ಸಿನಿಮಾವನ್ನು  OTT ಗೆ ನೀಡಿರುವುದು ಫಿಯೋಕ್  ಅನ್ನು ಕೆರಳಿಸಿದೆ. ಹೀಗಾಗಿ ಭವಿಷ್ಯದಲ್ಲಿ ದುಲ್ಖರ್  ನಟನೆಯ ಯಾವುದೇ ಚಿತ್ರಕ್ಕೂ ಸಹಕರಿಸುವುದಿಲ್ಲ ಎಂದು ಫಿಯೋಕ್ ಘೋಷಿಸಿದ್ದಾರೆ.

ದುಲ್ಖರ್ ಅನ್ಯ ಭಾಷೆಯ ಚಿತ್ರಗಳಿಗೂ ಸಹಕರಿಸುವುದಿಲ್ಲ. ಸೆಲ್ಯೂಟ್  ಚಿತ್ರವನ್ನು ಚಿತ್ರಮಂದಿರದಲ್ಲಿ ಬಿಡುಗಡೆ  ಮಾಡುವ  ಒಪ್ಪಂದಕ್ಕೆ  ಚಿತ್ರತಂಡ ಸಹಿ ಹಾಕಿದ್ದರು ಎಂದು ಫಿಯೋಕ್ ಹೇಳಿಕೊಂಡಿದೆ.

ಸೆಲ್ಯೂಟ್ ಚಿತ್ರವು ಬಾಬಿ ಸಂಜಯ್ ಬರೆದು ರೋಶನ್ ಆಂಡ್ರ್ಯೂಸ್ ನಿರ್ದೇಶನದ ಚಿತ್ರವಾಗಿದೆ.  ಅಸ್ಲಂ ಕೆ ಪುರ ಕ್ಯಾಮೆರಾ ನಿರ್ವಹಿಸಲಿದ್ದಾರೆ.  ಎ ಶ್ರೀಕರ್ ಪ್ರಸಾದ್ ಸಂಕಲನ.  ಸಂಗೀತ ಜಾಕ್ವೆಸ್ ಬಿಜೋಯ್ ಅವರದ್ದು.  ಚಿತ್ರದಲ್ಲಿ ದುಲ್ಕರ್ ಜೊತೆಗೆ ಡಯಾನಾ ಪೆಂಟಿ, ಮನೋಜ್ ಕೆ ಜಯನ್ ಮತ್ತು ಲಕ್ಷ್ಮಿ ಗೋಪಾಲಸ್ವಾಮಿ ಕೂಡ ನಟಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಜಾಬ್ ಧರಿಸಿದರೆ ಏನು ಸಮಸ್ಯೆ: ಅಸಾದುದ್ದೀನ್ ಓವೈಸಿ

ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಮುಖಂಡನ ಮೃತದೇಹ ಪತ್ತೆ

ಹಿಜಾಬ್​ ತೀರ್ಪು: ತರಗತಿ ಬಹಿಷ್ಕರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು

ಕಾಶ್ಮೀರದಲ್ಲಿ ಪಂಡಿತರಿಗಿಂತ ಮುಸ್ಲಿಂಮರೇ ಹೆಚ್ಚು ಹತ್ಯೆಯಾಗಿದ್ದಾರೆ!

ಹೈಕೋರ್ಟ್ ತೀರ್ಪು ಅತ್ಯಂತ ಐತಿಹಾಸಿಕವಾಗಿದೆ: ಪ್ರಮೋದ್​ ಮುತಾಲಿಕ್

ಇತ್ತೀಚಿನ ಸುದ್ದಿ