102 ವರ್ಷದ ಮಾಜಿ ಶಿಕ್ಷಕನಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೋರ್ಟ್! - Mahanayaka
8:29 AM Wednesday 15 - October 2025

102 ವರ್ಷದ ಮಾಜಿ ಶಿಕ್ಷಕನಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!

parashurama
19/03/2022

ಚೆನ್ನೈ: ಐದನೇ ತರಗತಿಯ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 102 ವರ್ಷದ ವ್ಯಕ್ತಿಯೊಬ್ಬನಿಗೆ ತಮಿಳುನಾಡಿನ ತಿರುವಳ್ಳೂರು ಮಹಿಳಾ ನ್ಯಾಯಾಲಯ15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.


Provided by

ಕೆ.ಪರಶುರಾಮನ್ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ತನ್ನ ವಯಸ್ಸಿನ ಮಿತಿ ಕಳೆದ ಬಳಿಕವೂ ಜೈಲು ಪಾಲಾದ ಶಿಕ್ಷಕನಾಗಿದ್ದಾನೆ.

ಈ ಘಟನೆ ಜುಲೈ 2018 ರಲ್ಲಿ ನಡೆದಿತ್ತು.  ಸರ್ಕಾರಿ ಶಾಲೆಯಲ್ಲಿಮುಖ್ಯೋಪಾಧ್ಯಾಯ ಹುದ್ದೆಯಿಂದ ನಿವೃತ್ತನಾದ ಬಳಿಕ ಪರಶುರಾಮ್ ತನ್ನ ಸ್ವಂತ ಮನೆಯ ಸಮೀಪವೇ ಐದು ಮನೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದ್ದರು. ಈ ಬಾಡಿಗೆ ಮನೆಯ ಪೈಕಿ ಒಂದು ಮನೆಯಲ್ಲಿ ವಾಸಿಸುತ್ತಿದ್ದ ದಂಪತಿಯ ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದ.

ಬಾಲಕಿಯ ತಂದೆ ಘಟನೆ ಸಂಬಂಧ ಪರಶುರಾಮ್ ವಿರುದ್ಧ ಮಹಿಳಾ  ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,   ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಇನ್ಸ್‌ಪೆಕ್ಟರ್ ಲತಾ ತಿಳಿಸಿದ್ದಾರೆ.

ಪೊಲೀಸರು ಈತನ ವಿರುದ್ಧ ಪೋಕ್ಸೋ ಆರೋಪದಡಿ ಪ್ರಕರಣ ದಾಖಲಿಸಿದ್ದರು.  ಘಟನೆ ನಡೆದಾಗ ಆರೋಪಿಗೆ 99 ವರ್ಷ ವಯಸ್ಸಾಗಿತ್ತು.  ಕೊನೆಗೂ ಮೂರು ವರ್ಷಗಳ ವಿಚಾರಣೆ ಬಳಿಕ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕುರಿ ಮಾಂಸ ಖರೀದಿಸದಿದ್ದಕ್ಕೆ ಮಗ, ಸೊಸೆ, ಮೊಮ್ಮಕ್ಕಳಿಗೆ ಬೆಂಕಿ ಹಚ್ಚಿ ಕೊಂದೆ ಎಂದ ಪಾಪಿ!

ಹೋಳಿ ಆಚರಣೆ ವೇಳೆ ಎದೆಗೆ ಚೂರಿಯಿಂದ ಇರಿದುಕೊಂಡು ಯುವಕ ಸಾವು

ಪುತ್ತೂರು: ಕೋಟಿ ಚೆನ್ನಯ ಜೋಡುಕರೆ ಕಂಬಳ | ಕಂಬಳದಿಂದ ಮನೋಸ್ಥೈರ್ಯ ವೃದ್ಧಿಸುತ್ತದೆ | ಕೇಶವ ಪ್ರಸಾದ್‌ ಮುಳಿಯ

ಜೀವ ಉಳಿಸಿದ ಆ್ಯಪಲ್​ ವಾಚ್

ಮಕ್ಕಳಿಗೆ ಬೇಕಿರುವುದು ಭವಿಷ್ಯ ರೂಪಿಸುವ ಶಿಕ್ಷಣ: ಎಚ್‌.ಡಿ.ಕುಮಾರಸ್ವಾಮಿ

ಇತ್ತೀಚಿನ ಸುದ್ದಿ