ಆಟೋಗೆ ಬಣ್ಣ ತುಂಬಿದ ಬಲೂನ್ ಎಸೆದ ಕಿಡಿಗೇಡಿ: ರಸ್ತೆಯಲ್ಲಿ ಮಗುಚಿ ಬಿದ್ದ ಆಟೋ | ವಿಡಿಯೋ ವೈರಲ್ - Mahanayaka

ಆಟೋಗೆ ಬಣ್ಣ ತುಂಬಿದ ಬಲೂನ್ ಎಸೆದ ಕಿಡಿಗೇಡಿ: ರಸ್ತೆಯಲ್ಲಿ ಮಗುಚಿ ಬಿದ್ದ ಆಟೋ | ವಿಡಿಯೋ ವೈರಲ್

viral video
20/03/2022


Provided by

ಬಾಗ್‌ ಪತ್‌: ಹೋಳಿ ಹಿನ್ನೆಲೆಯಲ್ಲಿ ಕಿಡಿಗೇಡಿಯೋರ್ವ ರಸ್ತೆ ಬದಿಯಲ್ಲಿ ನಿಂತು ವಾಹನಗಳ ಮೇಲೆ ಬಣ್ಣ ತುಂಬಿದ ಬಲೂನ್ ಎಸೆಯುತ್ತಿದ್ದು, ಈ ವೇಳೆ ಆಟೋವೊಂದು ಮಗುಚಿ ಬಿದ್ದು, ಆಟೋದಲ್ಲಿದ್ದವರು ಗಾಯಗೊಂಡ ಘಟನೆ ಬಾಗ್‌ಪತ್ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವಾರು ಕಿಡಿಗೇಡಿ ಯುವಕರು ರಸ್ತೆಯಲ್ಲಿ ಹೋಗುತ್ತಿರುವ ವಾಹನಗಳಿಗೆ ಬಣ್ಣಗಳು ತುಂಬಿದ ಬಲೂನ್ ನ್ನು ಎಸೆಯುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ವೇಗವಾಗಿ ಆಟೋವೊಂದು ಬರುತ್ತಿದ್ದು, ಈ ವೇಳೆ ಯುವಕನೋರ್ವ ಆಟೋಗೆ ಬಲೂನ್ ಎಸೆದಿದ್ದಾನೆ. ಏಕಾಏಕಿ ನಡೆದ ಘಟನೆಯಿಂದ ಆಟೋ ಚಾಲಕ ಬೆಚ್ಚಿ ಬಿದ್ದಿದ್ದು, ಈ ವೇಳೆ ಆಟೋ ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದು, ಸುಮಾರು 200 ಮೀಟರ್ ಗಳವರೆಗೆ ರಸ್ತೆಯಲ್ಲಿ ಆಟೋ ಎಳೆದುಕೊಂಡು ಹೋಗಿದೆ.

ಆಟೋದಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಘಟನೆಯ ದೃಶ್ಯ ಕಂಡು ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಹೋಳಿ ಆಚರಣೆಯ ಹೆಸರಿನಲ್ಲಿ ಇಂತಹ ದುಷ್ಕೃತ್ಯ ನಡೆಸುತ್ತಿರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ವಿಡಿಯೋವನ್ನು ಪರಿಶೀಲನೆ ನಡೆಸಿದ್ದು, ಕಿಡಿಗೇಡಿ ಯುವಕರ ಪತ್ತೆಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಆಟೋ ಮಗುಚಿ ಬೀಳುತ್ತಿದ್ದಂತೆಯೇ ಬಣ್ಣ ಎಸೆದ ಕಿಡಿಗೇಡಿ ಬ್ಯಾರಿಕೇಡ್ ನ್ನು ದಾಟಿ ಸ್ಥಳದಿಂದ ಓಡಿ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಆಟೋ ಮಗುಚಿ ಬಿದ್ದ ದೃಶ್ಯ ಭೀಕರವಾಗಿ ಸೆರೆಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಿಶ್ವದ ಅತ್ಯಂತ ಸಂತೋಷದ ದೇಶಗಳ ಪಟ್ಟಿ ಬಿಡುಗಡೆ: ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ಬಿಜೆಪಿಯಿಂದ ‘ದಿ ಕಾಶ್ಮೀರ್ ಫೈಲ್ಸ್ ‘ ಪ್ರಚಾರ ಮಾಡಿ ಗುಜರಾತ್, ರಾಜಸ್ಥಾನ್ ಚುನಾವಣೆ ಗೆಲ್ಲುವ ತಂತ್ರಗಾರಿಕೆ: ಶಿವಸೇನಾ ಮುಖಂಡ ಸಂಜಯ್ ರಾವತ್

ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು: ಕಲ್ಲಡ್ಕ ಪ್ರಭಾಕರ್‌

ಬಿಜೆಪಿಯವರು ಕರ್ನಾಟಕದಲ್ಲಿ ಸ್ವಂತ ಶಕ್ತಿಯಿಂದ ಗೆದ್ದು ಬಂದಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ

ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಚಿವ ಮಾಧುಸ್ವಾಮಿ

ಇತ್ತೀಚಿನ ಸುದ್ದಿ