ಟಿಎಂಸಿ ಮುಖಂಡನ ಕೊಲೆಗೆ ಪ್ರತಿಕಾರ: ಮನೆಗೆ ಬೆಂಕಿ ಹಚ್ಚಿ 10 ಜನರನ್ನು ಕೊಂದ ಪಾಪಿಗಳು - Mahanayaka

ಟಿಎಂಸಿ ಮುಖಂಡನ ಕೊಲೆಗೆ ಪ್ರತಿಕಾರ: ಮನೆಗೆ ಬೆಂಕಿ ಹಚ್ಚಿ 10 ಜನರನ್ನು ಕೊಂದ ಪಾಪಿಗಳು

west beengal
22/03/2022

ಕೋಲ್ಕತ್ತ: ಟಿಎಂಸಿ ಮುಖಂಡರೊಬ್ಬರ ಹತ್ಯೆಗೆ ಪ್ರತೀಕಾರವಾಗಿ ಅವರ ಬೆಂಬಲಿಗರ ಗುಂಪು ವಿರೋಧಿ ಗುಂಪಿನವರ ಮನೆಗಳಿಗೆ ಬೆಂಕಿ ಹಚ್ಚಿ ಸುಮಾರು 10 ಮಂದಿಯ ಸಾವಿಗೆ ಕಾರಣರಾದ ಘಟನೆ ಕೋಲ್ಕತ್ತದಲ್ಲಿ ನಡೆದಿದೆ.


Provided by

ಪಶ್ಚಿಮ ಬಂಗಾಳದ ಬಿರ್‌ ಭುಮ್‌ ನ ರಾಮಪುರಹಾಟ್‌ ನ ಬಗುಟಿ ಗ್ರಾಮ ಪಂಚಾಯತ್ ಮುಖಂಡ‌ ಭಾದು ಶೇಖ್‌ ಅವರ ಮೇಲೆ ಸೋಮವಾರ ರಾತ್ರಿ ಬಾಂಬ್ ದಾಳಿ ನಡೆದಿತ್ತು. ದಾಳಿ ವೇಳೆ ಅವರು ಅಂಗಡಿಯೊಂದರಲ್ಲಿ ಇದ್ದರು. ತತ್ ಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ದಾರಿ ಮಧ್ಯೆಯೇ ಮೃತಪಟ್ಟಿದ್ದರು.

ಮುಖಂಡ ಮೃತಪಟ್ಟಿರುವ ಸುದ್ದಿ ತಿಳಿದು ರೊಚ್ಚಿಗೆದ್ದ ಅವರ ಬೆಂಬಲಿಗರ ಗುಂಪೊಂದು ಆ ಗ್ರಾಮದಲ್ಲಿರುವ ವಿರೋಧಿ ಗುಂಪಿನ ಕೆಲವರ ಮನೆಗಳ ಮೇಲೆ ದಾಳಿ ನಡೆಸಿ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಿಂದಾಗಿ ಸುಮಾರು 10 ಮಂದಿ ಸಜೀವ ದಹನವಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಸೋಮವಾರ ರಾತ್ರಿಯೇ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಸುಮಾರು 12 ಮನೆಗಳು ಸುಟ್ಟು ಕರಕಲಾಗಿವೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮದುವೆಯ ಮರುದಿನವೇ ಕೆರೆಯಲ್ಲಿ ಶವವಾಗಿ ಪತ್ತೆಯಾದ ಯುವಕ

ಬೈಕ್-ಇನೋವಾ ಕಾರ್ ನಡುವೆ ಅಪಘಾತ: ಬೈಕ್ ಸವಾರನಿಗೆ ಗಾಯ

ಚೀನಾ ವಿಮಾನ ದುರಂತ: 133 ಮಂದಿ ಸಾವು ಸಾಧ್ಯತೆ

ಪುನೀತ್‌ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್‌ ಪ್ರಧಾನ

ಹುಟ್ಟುವ ಮಗು ಯಾವ ಜಾತಿಯದ್ದು? | ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ!

ಇತ್ತೀಚಿನ ಸುದ್ದಿ