ಪುಟಿನ್ ಪ್ರಮುಖ ಸಲಹೆಗಾರ ಅನಾಟೊಲಿ ಚುಬೈಸ್ ರಾಜೀನಾಮೆ - Mahanayaka
10:24 AM Wednesday 15 - October 2025

ಪುಟಿನ್ ಪ್ರಮುಖ ಸಲಹೆಗಾರ ಅನಾಟೊಲಿ ಚುಬೈಸ್ ರಾಜೀನಾಮೆ

anatoli
24/03/2022

ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ದಾಳಿ ದಿನೇ ದಿನೇ ಹೆಚ್ಚುತ್ತಿದ್ದು, ಈ ದಾಳಿಯನ್ನು ವಿರೋಧಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ನ ಪ್ರಮುಖ ಸಲಹೆಗಾರ ರಾಜೀನಾಮೆ ನೀಡಿರುವ ಬಗ್ಗೆ ವರದಿಯಾಗಿದೆ.


Provided by

ಉಕ್ರೇನ್ ಮೇಲೆ ರಷ್ಯಾ ದಾಳಿ ಬಗ್ಗೆ ವಿಶ್ವಾದ್ಯಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟೀನ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಈ ವಿರೋಧ ರಷ್ಯಾ ಸರ್ಕಾರದಲ್ಲೇ ಹಬ್ಬಿದ್ದು, ಪುಟಿನ್‍ನ ಪ್ರಮುಖ ಸಲಹೆಗಾರ ಅನಾಟೊಲಿ ಚುಬೈಸ್ ರಾಜೀನಾಮೆಯನ್ನು ನೀಡಿದ್ದಾರೆ.

ಅನಾಟೊಲಿ ಚುಬೈಸ್ ಸುಸ್ಥಿರ ಅಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳ ಸಂಬಂಧಕ್ಕಾಗಿ ಕ್ರೆಮ್ಲಿನ್‍ನ ವಿಶೇಷ ಪ್ರತಿನಿಧಿಯಾಗಿದ್ದರು. ಆದರೆ ರಷ್ಯಾ, ಉಕ್ರೇನ್‍ನ ಮೇಲೆ ದಾಳಿ ನಡೆಸುತ್ತಿರುವುದರಿಂದ ಪುಟಿನ್ ಮೇಲೆ ಚುಬೈಸ್ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆಯನ್ನು ನೀಡಿದ್ದಾರೆ.

ಚುಬೈಸ್ ರಾಜೀನಾಮೆಯನ್ನು ನೀಡುವುದರ ಜೊತೆಗೆ ರಷ್ಯಾವನ್ನು ತೊರೆದಿದ್ದು, ಟರ್ಕಿಯಲ್ಲಿ ನೆಲೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಬುಧವಾರ ಚುಬೈಸ್ ರಾಜೀನಾಮೆ ನೀಡಿದ್ದಾರೆ ಎಂದು ರಷ್ಯಾ ಸರ್ಕಾರ ದೃಢಪಡಿಸಿದರು. ಆದರೆ ಚುಬೈಸ್ ರಷ್ಯಾವನ್ನು ತೊರೆದಿರುವ ಬಗ್ಗೆ ಇನ್ನೂ ದೃಢಿಕರಿಸಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಧಿಕಾರ ದುರುಪಯೋಗ: ಎಂ.ಪಿ.ರೇಣುಕಾಚಾರ್ಯ ತನ್ನ ಇಬ್ಬರು ಮಕ್ಕಳಿಗೂ ಎಸ್​ಸಿ ಜಾತಿ ಪ್ರಮಾಣಪತ್ರ ಕೊಡಿಸಿದ್ದಾರೆ; ಕಾಂಗ್ರೆಸ್ ವಕ್ತಾರ ಆರೊಪ

ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ: ಬಿಬಿಎಂಪಿ ಉಪ ಆಯುಕ್ತರ ವಿರುದ್ಧ ಪ್ರಕರಣ ದಾಖಲು

ಹಿಜಾಬ್ ನಿಷೇಧ ಪ್ರಕರಣ: ತುರ್ತು ಮನವಿ ಆಲಿಸಲು ಸುಪ್ರೀಂ ಕೋರ್ಟ್ ನಕಾರ

ಅಪ್ರಾಪ್ತ ಬಾಲಕಿಯ ಅತ್ಯಾಚಾರ: ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

ಇತ್ತೀಚಿನ ಸುದ್ದಿ