ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದಲ್ಲಿ ಮಹಿಳೆಯ ಬ್ಯಾಗ್ ಎಗರಿಸಿದ ಕಳ್ಳನ ಬಂಧನ! - Mahanayaka

ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದಲ್ಲಿ ಮಹಿಳೆಯ ಬ್ಯಾಗ್ ಎಗರಿಸಿದ ಕಳ್ಳನ ಬಂಧನ!

nethrawati
29/03/2022

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ಆಗಮಿಸಿದ್ದ ಯಾತ್ರಿಕರೊಬ್ಬರು ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಅವರ ಚಿನ್ನಾಭರಣಗಳಿದ್ದ ಬ್ಯಾಗ್ ನ್ನು ಎಗರಿಸಿದ ಘಟನೆ ನಡೆದಿತ್ತು. ಇದೀಗ ಧರ್ಮಸ್ಥಳ  ಪೊಲೀಸರು ಸೂಕ್ತ ತನಿಖೆ ನಡೆಸಿ ಆರೋಪಿ ಹಾಗೂ ಕಳವಾಗಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


Provided by

ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಶ್ರೀಧರ‌ ನಾಯರಿ ಎಂಬವರು ಸ್ನಾನ ಮಾಡಲು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ತಮ್ಮ‌ ಚಿನ್ನಾಭರಣ ಹಾಗೂ ಹಣ ಇದ್ದ ಬ್ಯಾಗ್ ಇಟ್ಟಿದ್ದರು. ಈ ವೇಳೆ ಯಾರೋ ಕಳ್ಳರು ಬ್ಯಾಗ್ ನ್ನು ಎಗರಿಸಿ ಪರಾರಿಯಾಗಿದ್ದರು. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ತನಿಖೆ ನಡೆಸಿದ ಧರ್ಮಸ್ಥಳ ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಸಾಂಗೋಲಾ ತಾಲೂಕಿನ ಷಾರೆ ಗ್ರಾಮದ ಇಂದಿರಾನಗರದ ನಿವಾಸಿ ಮಿತುನ್ ಚೌವ್ಹಾಣ್ (31)  ಬಂಧಿತ ಆರೋಪಿಯಾಗಿದ್ದು, ಆತನ ಬಳಿಯಿದ್ದ 80,000/- ಮೌಲ್ಯದ 37 ಗ್ರಾಂನ ಚಿನ್ನದ ಓಲೆ, 32,000/- ಮೌಲ್ಯದ 8.04 ಗ್ರಾಂ ನ ಲಕ್ಷ್ಮೀ ಮಾಲೆ, 16,230 ಮೌಲ್ಯದ ‌ಚಿನ್ನದ ಸರ, 40,000/- ಮೌಲ್ಯದ 10.2 ಗ್ರಾಂ ನ ಬ್ರೇಸ್ ಲೈಟ್ , 15,000/- ಮೌಲ್ಯದ ಬ್ರೇಸ್ ಲೈಟ್ , 8,500/- ಮೌಲ್ಯದ 2.190 ಗ್ರಾಂ ನಉಂಗುರವನ್ನು ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 2.4 ಲಕ್ಷವಾಗಿದೆ.

ಆರೋಪಿಯು ದೇಶದ ವಿವಿಧ ಪ್ರಸಿದ್ಧ ಯಾತ್ರಾ ಸ್ಥಳಗಳಿಂದ ಕಳ್ಳತನ ಮಾಡುವ ಅಭ್ಯಾಸ ಹೊಂದಿದ್ದು, ಈತನ ಮೇಲೆ ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಯುವತಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಯುವಕ; ಆದರೆ ಮೃತಪಟ್ಟಿದ್ದು ಯುವಕ

1 ಕೋಟಿ ರೂ.ಗೂ ಅಧಿಕ ಮೌಲ್ಯದ ಬ್ರೌನ್ ಶುಗರ್ ಸಹಿತ ಆರೋಪಿಗಳ ಬಂಧನ

ಒಂದೊಂದೇ ರೂಪಾಯಿ ಕೂಡಿಟ್ಟು ಬೈಕ್ ಖರೀದಿಸಿದ ಯುವಕ

ಬಸ್,  ದ್ವಿಚಕ್ರ ವಾಹನದ ನಡುವೆ ಅಪಘಾತ: ಹೆಡ್ ಕಾನ್ಸ್‌ಟೇಬಲ್ ಗೆ ಗಂಭೀರ ಗಾಯ

ರಂಜಾನ್ ಆರಂಭವಾಗುತ್ತಿದ್ದಂತೆಯೇ ಭಾರೀ ಬೆಲೆಗೆ ಮಾರಾಟವಾದ ಒಂಟೆ

ಇತ್ತೀಚಿನ ಸುದ್ದಿ