ಇತಿಹಾಸ ತಿರುಚುವುದು ಒಳ್ಳೆ ಬೆಳವಣಿಗೆಯಲ್ಲ: ಎಚ್.ವಿಶ್ವನಾಥ್ - Mahanayaka

ಇತಿಹಾಸ ತಿರುಚುವುದು ಒಳ್ಳೆ ಬೆಳವಣಿಗೆಯಲ್ಲ: ಎಚ್.ವಿಶ್ವನಾಥ್

h-vishwanath-mn
31/03/2022


Provided by

ನವದೆಹಲಿ: ಟಿಪ್ಪು, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ವಿರುದ್ಧ ಮೊದಲು ಧ್ವನಿ ಎತ್ತಿದ್ದವರು. ಅವರ ಬಗ್ಗೆ ಬೇಕಾಬಿಟ್ಟಿ ಮಾತನಾಡುವುದು ಸರಿಯಲ್ಲ.ಇತಿಹಾಸ ತಿರುಚುವುದು ಒಳ್ಳೆ ಬೆಳವಣಿಗೆಯಲ್ಲ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಜಬ್‍ನಿಂದ ಆರಂಭವಾಗಿ ಈಗ ಪಠ್ಯಪುಸ್ತಕವನ್ನೇ ತಿರುಚಲಾಗುತ್ತಿದೆ. ರೋಹಿತ್ ಚಕ್ರತೀರ್ಥ ಹಿನ್ನೆಲೆ ಏನು?, ಎಷ್ಟು ವರ್ಷ ಪಾಠ ಮಾಡಿದ್ದಾರೆ? ಅವರಿಗೆ ಇತಿಹಾಸ ಎಷ್ಟು ಗೊತ್ತಿದೆ..? ಕೇವಲ ಕೆಲವು ನಾಯಕರ ಪರ ಕೆಲಸ ಮಾಡಿದರು ಎನ್ನುವ ಕಾರಣಕ್ಕೆ ಅವರನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿ ನೇಮಿಸಿದ್ದಾರೆ. ಅವರು ಇಂದು ಟಿಪ್ಪು ಸುಲ್ತಾನ್‌ರ ಒಂದು ಇತಿಹಾಸ ಬದಲಿಸಲು ಹೊರಟಿದ್ದಾರೆ. ಟಿಪ್ಪು ಸುಲ್ತಾನ್ ವೀರ ಸೇನಾನಿ, ಸೂರ್ಯ – ಚಂದ್ರ ಇರುವವರೆಗೂ ಟಿಪ್ಪು ಸುಲ್ತಾನ್ ಇರ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸರ್ಕಾರ ಇರುವುದು ಬಿಜೆಪಿಯದ್ದು, ಆರ್‌ಎಸ್‌ಎಸ್‌, ವಿಎಚ್‌ಪಿ, ಬಜರಂಗದಳದಲ್ಲ, ಸಂವಿಧಾನ ಮೀರಿ ವರ್ತಿಸುತ್ತಿರುವ ಕೆಲವು ಸಂಘಟನೆಗಳ ವಿರುದ್ಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ನಾನು ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಆದರೆ ಇಂದು ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಬೇಸರವಾಗಿದೆ. ನಾನು ಬಿಜೆಪಿಯನ್ನು ಪ್ರತಿನಿಧಿಸುತ್ತೇನೆ. ಹಾಗಂತ ಎಲ್ಲವನ್ನೂ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದರು.

ಈ ನಡುವೆ ಸಮುದಾಯದ ಒಂದಕ್ಕೆ ದೇವಸ್ಥಾನ ಬಳಿ ವ್ಯಾಪಾರ ಮಾಡಬೇಡಿ. ಹಲಾಲ್ ಮಾಡಬೇಡಿ ಎನ್ನುವುದು ಸರಿಯಲ್ಲ. ಸಮಾಜದಲ್ಲಿ ಇದು ಘಾಸಿ ಮಾಡುತ್ತದೆ. ಕೆಲವು ಸಂಘಟನೆಗಳು ಹದ್ದು ಮೀರಿ ವರ್ತಿಸುತ್ತಿವೆ. ಜನರಿಂದ ಆಯ್ಕೆಯಾದ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ನಾನು ಸರ್ಕಾರಕ್ಕೆ ಆಗ್ರಹಕ್ಕೆ ಮಾಡುತ್ತೇನೆ, ಬೊಮ್ಮಾಯಿ ಅವರು ಕ್ರಮ ತೆಗೆದುಕೊಳ್ಳಬೇಕು ಶಾಂತಿಯನ್ನು ಕಾಪಡಬೇಕು. ಬಿ.ಎಸ್ ಯಡಿಯೂರಪ್ಪ ಅವರು ಕೂಡಾ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಇದೇ ವೇಳೆ ವಿಶ್ವನಾಥ್ ಒತ್ತಾಯಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಂಜಾನ್ ವೇಳೆ ಹಿಂದೂಗಳ ವ್ಯಾಪಾರಕ್ಕೆ ಧಕ್ಕೆ ತರಬೇಡಿ, ಅವರೊಂದಿಗೆ ಸಹಕರಿಸಿ: ಮುಸ್ಲಿಮ್ ಮುಖಂಡರಿಂದ ಮನವಿ

ಮೊಸಳೆಗಳು, ಹಲ್ಲಿಗಳು, ಹಾವುಗಳು: ಆತನ ಜಾಕೆಟ್, ಕಾರಿನಲ್ಲಿತ್ತು 1,700 ಜೀವಿಗಳು

ಚಂದ್ರಗಿರಿಯಲ್ಲಿ ಪತ್ತೆಯಾಯ್ತು 40 ಕೆ.ಜಿ. ತೂಕದ ಬೃಹತ್ ಆಮೆ

ಒಂದೇ ದೇಹ, ಎರಡು ತಲೆ ಹೊಂದಿದ ಅಪರೂಪದ ಸಯಾಮಿ ಶಿಶು ಜನನ

ಇತ್ತೀಚಿನ ಸುದ್ದಿ