ಗಾಂಜಾ ವ್ಯಸನಿ 15 ವರ್ಷ ಮಗನ ಚಟ ಬಿಡಿಸಲು ಮುಖಕ್ಕೆ ಖಾರದ ಪುಡಿ ಎರಚಿದ ತಾಯಿ! - Mahanayaka

ಗಾಂಜಾ ವ್ಯಸನಿ 15 ವರ್ಷ ಮಗನ ಚಟ ಬಿಡಿಸಲು ಮುಖಕ್ಕೆ ಖಾರದ ಪುಡಿ ಎರಚಿದ ತಾಯಿ!

viral video
04/04/2022


Provided by

ಹೈದರಾಬಾದ್: ಗಾಂಜಾದ ದಾಸನಾಗಿದ್ದ 15 ವರ್ಷದ ಬಾಲಕನಿಗೆ  ತಾಯಿ ಘೋರ ಶಿಕ್ಷೆಯನ್ನು ನೀಡಿದ ಘಟನೆ ತೆಲಂಗಾಣದ ಸೂರ್ಯ ಪೇಟ್ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎಲ್ಲಿಯೋ ಹೇಗೆಯೋ ಗಾಂಜಾ ಸೇದುವುದನ್ನು ಕಲಿತಿದ್ದ 15 ವರ್ಷದ ಹುಡುಗ. ಗಾಂಜಾಕ್ಕೆ ದಾಸನಾಗಿದ್ದ. ಗಾಂಜಾ ಸೇದಲು ಹಣ ಸಾಕಾಗದ ವೇಳೆ ಹಣ ನೀಡುವಂತೆ ತಾಯಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ.

ಮಗನ ವರ್ತನೆಯನ್ನು ಸರಿಪಡಿಸಲು ತಾಯಿ ಆಯ್ದುಕೊಂಡ ಮಾರ್ಗ ಮಾತ್ರ ಬಹಳ ಕಠಿಣವಾದದ್ದಾಗಿತ್ತು. ಗಾಂಜಾ ಸೇದಿ ಬಂದಿದ್ದ ಮಗನನ್ನು ಮನೆಯ ಸಮೀಪದ ಕಂಬಕ್ಕೆ ಕಟ್ಟಿ ಹಾಕಿದ ತಾಯಿ ಆತನ ಮುಖಕ್ಕೆ ಮೆಣಸಿನ ಪುಡಿ ಎರಚಿದ್ದಾಳೆ. ಇದರಿಂದಾಗಿ 15 ವರ್ಷದ ಹುಡುಗ ವಿಲವಿಲನೇ ಒದ್ದಾಡಿ ಚೀರಾಡಿದ್ದಾನೆ.

ಇನ್ನು ಮುಂದೆ ನಾನು ಗಾಂಜಾ ಸೇದುವುದಿಲ್ಲ ಎಂದು ಹೇಳುವವರೆಗೂ ತಾಯಿ ಮಗನನ್ನು ಬಿಡಲಿಲ್ಲ. ಕೊನೆಗೆ ಪುತ್ರ ಗಾಂಜಾ ಸೇದುವುದಿಲ್ಲ ಎಂದು ಪ್ರಮಾಣ ಮಾಡಿದ್ದು, ಆ ಬಳಿಕ ತಾಯಿ ಆತನನ್ನು ಬಿಟ್ಟಿದ್ದಾಳೆ.

ಮಗ ಗಾಂಜಾ ಸೇದಬಾರದು ಎನ್ನುವ ಮಹಿಳೆಯ ಕಾಳಜಿ ಒಪ್ಪಲೇ ಬೇಕಿದೆ. ಆದರೆ 15ರ ಎಳೆಯ ಹುಡುಗನಿಗೆ ಇಂತಹ ಶಿಕ್ಷೆ ನೀಡಿರುವುದು ಸರಿಯಲ್ಲ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಡುವೆ ಶಾಕ್ ನೀಡಿದ ವಿದ್ಯುತ್ ಬೆಲೆ ಏರಿಕೆ!

ಮಸೀದಿ ಧ್ವನಿ ವರ್ಧಕ ತೆರವಿಗೆ ಆಗ್ರಹ: ಸಚಿವ ಈಶ್ವರಪ್ಪ, ಕುಮಾರಸ್ವಾಮಿ ಏನು ಹೇಳಿದರು?

ಗೋರಾಖ್ ನಾಥ್ ಮಠಕ್ಕೆ ನುಗ್ಗಿ ಮಚ್ಚಿನಿಂದ ದಾಳಿ ನಡೆಸಿದ ಮಾನಸಿಕ ಅಸ್ವಸ್ಥ

ಕೋವಿಡ್ ನಿರ್ಬಂಧಗಳನ್ನು  ಸಡಿಲಗೊಳಿಸಿದ ತಮಿಳುನಾಡು ಸರ್ಕಾರ

ಇತ್ತೀಚಿನ ಸುದ್ದಿ