ಕಾರ್ಖಾನೆಯಲ್ಲಿ ಸ್ಫೋಟ:  6 ಮಂದಿಯ ದಾರುಣ ಸಾವು - Mahanayaka
11:34 PM Wednesday 15 - October 2025

ಕಾರ್ಖಾನೆಯಲ್ಲಿ ಸ್ಫೋಟ:  6 ಮಂದಿಯ ದಾರುಣ ಸಾವು

fire
11/04/2022

ಅಹಮದಾಬಾದ್: ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸೋಮವಾರ ಸ್ಫೋಟ ಸಂಭವಿಸಿದ್ದು, ಆರು ಕಾರ್ಮಿಕರು ಮೃತಪಟ್ಟಿರುವ ಘಟನೆ ಗುಜರಾತ್‌ ನ ಭರೂಚ್ ಜಿಲ್ಲೆಯಲ್ಲಿ ನಡೆದಿದೆ.


Provided by

ಅಹಮದಾಬಾದ್‌ ನಿಂದ 235 ಕಿಮೀ ದೂರದಲ್ಲಿರುವ ದಹೇಜ್ ಕೈಗಾರಿಕಾ ಪ್ರದೇಶದ ಘಟಕದಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ.

ರಿಯಾಕ್ಟರ್‌ ಬಳಿ ಕೆಲಸ ಮಾಡುತ್ತಿದ್ದ ಆರು ಮಂದಿ ಮೃತಪಟ್ಟಿದ್ದು, ದ್ರಾವಕ ಬಟ್ಟಿ ಇಳಿಸುವ ಪ್ರಕ್ರಿಯೆ ವೇಳೆ ರಿಯಾಕ್ಟರ್‌ ಏಕಾಏಕಿ ಸ್ಫೋಟವಾಗಿದೆ ಎಂದು ಭರೂಚ್ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಪಾಟೀಲ್ ಹೇಳಿದ್ದಾರೆ.

ಇನ್ನು ರಿಯಾಕ್ಟರ್‌ನಲ್ಲಿನ ಸ್ಫೋಟದಿಂದಾಗಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಿಯಾಕ್ಟರ್ ಬಳಿ ಕೆಲಸ ಮಾಡುತ್ತಿದ್ದ ಎಲ್ಲಾ ಆರು ಮಂದಿ ಮೃತಪಟ್ಟಿದ್ದು ಅವರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇತ್ತೀಚಿನ ಸುದ್ದಿ