ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಕ್ಷಮೆಯಾಚಿಸಿದ ನಟ ಅಕ್ಷಯ್ ಕುಮಾರ್ | ಈ ಬಾರಿಯಾದರೂ ಮಾತು ಉಳಿಸಿಕೊಳ್ಳುತ್ತಾರಾ? - Mahanayaka
10:29 PM Tuesday 14 - October 2025

ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಕ್ಷಮೆಯಾಚಿಸಿದ ನಟ ಅಕ್ಷಯ್ ಕುಮಾರ್ | ಈ ಬಾರಿಯಾದರೂ ಮಾತು ಉಳಿಸಿಕೊಳ್ಳುತ್ತಾರಾ?

akshay kumar
21/04/2022

ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಜನರ ಆಕ್ರೋಶದ ಬಳಿಕ ಅಕ್ಷಯ್ ಕುಮಾರ್ ಪಾನ್ ಮಸಾಲ ಜಾಹೀರಾತಿನಿಂದ ಹಿಂದಕ್ಕೆ ಸರಿಯುವುದಾಗಿ ಟ್ವೀಟ್ ಮಾಡಿದ್ದಾರೆ.


Provided by

ನನ್ನ ಅಭಿಮಾನಿಗಳಿಗೆ ಹಿತೈಷಿಗಳಿಗೆ ನಾನು ಕ್ಷಮೆ ಕೇಳುತ್ತೇನೆ. ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆ ನನ್ನ ಮೇಲೆ ಪ್ರಭಾವ ಬೀರಿದೆ. ನಾನು ತಂಬಾಕು ಸೇವನೆಯನ್ನು ಉತ್ತೇಜಿಸುವುದಿಲ್ಲ. ಪಾನ್ ಮಸಾಲ ಜಾಹೀರಾತಿನಲ್ಲಿ(Tobacco Firm Ad) ಕೈಜೋಡಿಸಿರುವುದರ ಕುರಿತು ನಿಮ್ಮ ಪ್ರತಿಕ್ರಿಯೆಗಳನ್ನು  ಗೌರವಿಸುತ್ತೇನೆ.  ಇದರಿಂದ ಪಡೆದ ಸಂಭಾವನೆಯನ್ನು ಒಳ್ಳೆಯ ಉದ್ದೇಶಕ್ಕೆ ಬಳಸುತ್ತೇನೆ. ಒಪ್ಪಂದದ ಅವಧಿ ಮುಗಿಯುವವರೆಗೂ ಬ್ರಾಂಡ್ ನವರು ಜಾಹೀರಾತು ಪ್ರಕಟಿಸಬಹುದು. ಮುಂದೆ ಜಾಹೀರಾತು ಆಯ್ಕೆ ಮಾಡುವಾಗ ಮುನ್ನೆಚ್ಚರಿಕೆ ವಹಿಸುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದೆಯೂ ಅಕ್ಷಯ್ ಕುಮಾರ್(Akshay Kumar )ತಾನು ತಂಬಾಕು ಉತ್ಪನ್ನಗಳ ಜಾಹೀರಾತು ಪಡೆದುಕೊಳ್ಳುವುದಿಲ್ಲ ಎಂದು ಮಾತು ನೀಡಿದ್ದರು. ಆದರೆ, ಆ ಬಳಿಕ ತಮ್ಮ ಮಾತನ್ನು ಅವರು ಉಳಿಸಿಕೊಳ್ಳದೇ ಮತ್ತೆ ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ಅಂದು ಸ್ವಸ್ಥ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಕ್ಷಯ್ ಕುಮಾರ್, ನನಗೆ ಗುಟ್ಕಾ ಕಂಪೆನಿಗಳು ಜಾಹೀರಾತು ಮಾಡಿ ಎಂದು ಭಾರೀ ಹಣ ನೀಡಲು ಮುಂದೆ ಬರುತ್ತವೆ. ಆದರೆ, ಯಾವುದೇ ಕಾರಣಕ್ಕೂ ನಾನು ಆ ರೀತಿ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಆ ಬಳಿಕ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

ತೆಲುಗು ನಟ ಅಲ್ಲು ಅರ್ಜುನ್ ಪಾನ್ ಮಸಾಲ ಕಂಪೆನಿಯ ಜಾಹೀರಾತಿನಲ್ಲಿ ನಟಿಸಲು ನಿರಾಕರಿಸಿದ ಬಳಿಕ ಅಕ್ಷಯ್ ಕುಮಾರ್ ಶಾರೂಖ್ ಖಾನ್, ಅಜಯ್ ದೇವಗನ್ ಸೇರಿದಂತೆ ಹಲವು ನಟರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ತಂಬಾಕು ಜನರ ಪ್ರಾಣಕ್ಕೆ ಹಾನಿ ಉಂಟು ಮಾಡುತ್ತದೆ. ಆದರೆ ಜವಾಬ್ದಾರಿಯುತ ನಟರು ಇದನ್ನು ಬೆಂಬಲಿಸುತ್ತಿದ್ದಾರೆ. ಅದರಲ್ಲೂ ಪದ್ಮಶ್ರೀ ಪುರಸ್ಕೃತ ನಟ ಅಕ್ಷಯ್ ಕುಮಾರ್ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ಎಷ್ಟು ಸರಿ? ಇವರು ಪದ್ಮಶ್ರೀ ಗೌರವಕ್ಕೆ ಪಾತ್ರವಾಗಿರುವ ಇವರು ಸಮಾಜಕ್ಕೆ ತಂಬಾಕು ತಿನ್ನಲು ಉತ್ತೇಜಿಸುವುದು ಸರಿಯೇ ಎನ್ನುವ ಪ್ರಶ್ನೆಗಳು ಕೇಳಿ ಬಂದಿದ್ದವು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಟವಾಡುತ್ತಿದ್ದ ಬಾಲಕನಿಗೆ ಟಿಪ್ಪರ್ ಡಿಕ್ಕಿ: ಬಾಲಕನ ದಾರುಣ ಸಾವು

ಪ್ರಾಧ್ಯಾಪಕಿಯ ಬಗ್ಗೆ ಮಾನಹಾನಿಕರ ಪೋಸ್ಟರ್ ಅಂಟಿಸಿ ಕಿರುಕುಳ: ಇಬ್ಬರು ಪ್ರಾಧ್ಯಾಪಕರ ಬಂಧನ

ನೈತಿಕ ಶಿಕ್ಷಣ ಜಾರಿ: ಶಾಲಾ ಪಠ್ಯ ಕ್ರಮದಲ್ಲಿ ಕುರಾನ್ ಸೇರ್ಪಡೆ: ಬಿ.ಸಿ.ನಾಗೇಶ್

ಸರ್ಕಾರದ ಮೇಲೆ ಕಮಿಷನ್ ಆರೋಪ ಸತ್ಯಕ್ಕೆ ದೂರವಾದದ್ದು | ನಿರಂಜನಾನಂದಪುರಿ ಸ್ವಾಮೀಜಿ

ನಟ ಶಿವರಾಜ್ ಕುಮಾರ್ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ: ಅಷ್ಟಕ್ಕೂ ನಡೆದದ್ದೇನು?

ಇತ್ತೀಚಿನ ಸುದ್ದಿ