ತಮ್ಮದೇ ಸರ್ಕಾರದ ಆದೇಶಕ್ಕೆ ಬೆಲೆ ಕೊಡದ ಬಿಜೆಪಿ ಸಚಿವರು, ಮುಖಂಡರು - Mahanayaka

ತಮ್ಮದೇ ಸರ್ಕಾರದ ಆದೇಶಕ್ಕೆ ಬೆಲೆ ಕೊಡದ ಬಿಜೆಪಿ ಸಚಿವರು, ಮುಖಂಡರು

covid
26/04/2022


Provided by

ಹಾಸನ: ರಾಜ್ಯಾದ್ಯಂತ ಮಾಸ್ಕ್ ಕಡ್ಡಾಯ ಅಂತ ರಾಜ್ಯ ಸರ್ಕಾರ ಹೇಳಿದೆ. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿನ್ನೆ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದರು. ಆದರೆ, ಮಾಸ್ಕ್ ಕಡ್ಡಾಯ ಕಾನೂನನನ್ನು ಪಾಲಿಸುವವರು ಯಾರು ಅನ್ನೋ ಪ್ರಶ್ನೆ ಇದೀಗ ಕೇಳಿ ಬಂದಿದೆ.

ರಾಜ್ಯ ಸರ್ಕಾರದ ಆದೇಶದವನ್ನು ಸ್ವತಃ ಬಿಜೆಪಿ ನಾಯಕರೇ ಪಾಲಿಸದೇ ಉಲ್ಲಂಘಿಸಿದ್ದು,  ಹಾಸನಕ್ಕೆ ಆಗಮಿಸಿದ್ದ ಸಚಿವ ಅಶ್ವಥ್ ನಾರಾಯಣ್ ಹಾಗೂ ಪಕ್ಷದ ಮುಖಂಡರು ಹಾಸನ ಡೈರಿ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಿಕೊಂಡಿದ್ದಾರೆ.

ಅಶ್ವಥ್ ನಾರಾಯಣ್ ಅವರನ್ನು ಸ್ವಾಗತಿಸಲು ಬಂದಿದ್ದ  ಶಾಸಕ ಪ್ರೀತಂ ಗೌಡ ಸೇರಿದಂತೆ ಯಾರು ಕೂಡ ಸರ್ಕಾರದ ನಿಯಮದನ್ವಯ ಮಾಸ್ಕ್ ಧರಿಸಿಲ್ಲ. ಕನಿಷ್ಠ ಶಾಸ್ತ್ರಕ್ಕಾದರೂ ಮಾಸ್ಕ್ ಬಳಕೆ ಮಾಡಿದ್ದು ಕಂಡು ಬರಲಿಲ್ಲ.

ಜನಪ್ರತಿನಿಧಿಗಳಿಗೊಂದು ನ್ಯಾಯ, ಜನಸಾಮಾನ್ಯರಿಗೊಂದು ನ್ಯಾಯವೇ ಎನ್ನುವ ಪ್ರಶ್ನೆಗಳು ಇದೀಗ ಕೇಳಿ ಬಂದಿದೆ. ಸರ್ಕಾರದ ಆದೇಶವನ್ನು ಬಿಜೆಪಿಯವರೇ ಪಾಲಿಸದಿದ್ದರೆ, ಇನ್ಯಾರಿಗೆ ಈ ರೂಲ್ಸ್ ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಿದ್ದರಾಮಯ್ಯನಷ್ಟು ಅಸಮರ್ಥರು ನಮ್ಮ ಗೃಹ ಸಚಿವರಲ್ಲ: ನಳಿನ್ ಕುಮಾರ್ ಕಟೀಲ್

ಪಿಎಸ್ ಐ ಹಗರಣದಲ್ಲಿ ಗೃಹ ಸಚಿವರೇ ಶಾಮೀಲು: ಪ್ರಿಯಾಂಕ್ ಖರ್ಗೆ

ಜಾದೂವೇಳೆ ಆಕಸ್ಮಿಕವಾಗಿ ಬ್ಲೇಡ್ ಗಳ ಮಾಲೆ ನುಂಗಿದ ಮಾಂತ್ರಿಕ!

ಫ್ರಾನ್ಸ್ ಅಧ್ಯಕ್ಷರಾಗಿ ಪುನರಾಯ್ಕೆಯಾದ  ಇಮ್ಯಾನುಯೆಲ್ ಮ್ಯಾಕ್ರೋನ್

ಕಾರಿನ ಸೈಲೆನ್ಸರ್ ನಲ್ಲಿ ಕಾಣಿಸಿಕೊಂಡ ಹೊಗೆ: ಕಾರಿನಿಂದ ಇಳಿದರೂ ಹೋಯ್ತು ಪ್ರಾಣ!

ಇತ್ತೀಚಿನ ಸುದ್ದಿ