SBI ಗ್ರಾಹಕರಿಗೆ ಸಿಹಿ ಸುದ್ದಿ: ಸಾಲದಿಂದ ಮುಕ್ತರಾಗಲು ಬ್ಯಾಂಕ್ ನೀಡಿದೆ ಹೊಸ ಅವಕಾಶ - Mahanayaka

SBI ಗ್ರಾಹಕರಿಗೆ ಸಿಹಿ ಸುದ್ದಿ: ಸಾಲದಿಂದ ಮುಕ್ತರಾಗಲು ಬ್ಯಾಂಕ್ ನೀಡಿದೆ ಹೊಸ ಅವಕಾಶ

01/12/2020


Provided by

ಬೆಂಗಳೂರು: ಭಾರತೀಯ   ಸ್ಟೇಟ್ ಬ್ಯಾಂಕ್ ನಿಂದ ಸಾಲ ಪಡೆದಿರುವವರಿಗೆ ಸುಸ್ತಿ ಸಾಲ  ತೀರಿಸಲು ಬ್ಯಾಂಕ್ ನಿಂದ ಸುವರ್ಣ ಅವಕಾಶ ಕಲ್ಪಿಸಲಾಗಿದೆ. 2020-21ನೇ ಸಾಲಿನ ಋಣ ಸಮಾಧಾನ ಯೋಜನೆ ರೂಪಿಸಿರುವ ಬ್ಯಾಂಕ್ ಏಕ ಕಾಲದಲ್ಲಿ ಸಾಲವನ್ನುಇತ್ಯರ್ಥ ಪಡಿಸಲು ಅವಕಾಶ ನೀಡುವ ಮೂಲಕ ಸಿಹಿಸುದ್ದಿ ನೀಡಿದೆ.

ಭಾರತೀಯ ಸ್ಟೇಟ್ ಬ್ಯಾಂಕ್ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದ್ದು ಸುಸ್ತಿ ಸಾಲಗಾರರು ಋಣಮುಕ್ತರಾಗಲು ಸುವರ್ಣ  ಅವಕಾಶ ನೀಡಲಾಗಿದೆ. ಋಣ ಸಮಾಧಾನ ಯೋಜನೆ 2020-21 ರಂತೆ 20ಲಕ್ಷ ರೂ. ಗಳವರೆಗೆ ಸುಸ್ತಿದಾರ ಸಾಲಗಾರರಿಗೆ ಏಕ ಕಾಲದಲ್ಲಿ ಸಾಲ  ಇತ್ಯರ್ಥ ಯೋಜನೆ( ಟಿ ಸಿ) ಜಾರಿಗೊಳಿಸಲಾಗಿದೆ.




ಪಾವತಿಸಲು ಬಾಕಿ ಇರುವ ಸಾಲದಲ್ಲಿ ಶೇ15ರಿಂದ90ರವರೆಗೆ ರಿಯಾಯಿತಿ  ಪಡೆಯಲು ಅವಕಾಶ  ನೀಡಲಾಗಿದೆ. ಯೋಜನೆಯಲ್ಲಿ ಬಾಕಿ ಪಾವತಿಸಿದವರಿಗೆ  ಮರು ಸಾಲ ಪಡೆಯಲು  ಅದೇ ದಿನ ಅವಕಾಶ  ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಯೋಜನೆಯು ವ್ಯವಸಾಯ ಸಾಲ, ಸಣ್ಣ ಮತ್ತು ಮಧ್ಯಮ ಉದ್ಯೋಗ ಸಾಲ, ಶೈಕ್ಷಣಿಕ ಸಾಲ ಮತ್ತು ರೂ.5 ಲಕ್ಷದವರೆಗಿನ ಗೃಹ ಸಾಲಗಳಿಗೂ ಅನ್ವಯಿಸಲಿದೆ. ಇಂತಹ ಸುವರ್ಣಾವಕಾಶ ಯೋಜನೆಯು 31-01-2021ರಂದು ಕೊನೆಗೊಳ್ಳಲಿದ್ದು,    ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಶಾಖಾಧಿಕಾರಿಗಳನ್ನು ಭೇಟಿ ಮಾಡಬಹುದಾಗಿದೆ.

ಇತ್ತೀಚಿನ ಸುದ್ದಿ