ಪ್ರೀತಿ ವಿಚಾರದಲ್ಲಿ ಗಲಾಟೆ: ಯುವತಿಗೆ ಆಸಿಡ್ ಎರಚಿದ ಯುವಕ - Mahanayaka
4:49 AM Thursday 15 - January 2026

ಪ್ರೀತಿ ವಿಚಾರದಲ್ಲಿ ಗಲಾಟೆ: ಯುವತಿಗೆ ಆಸಿಡ್ ಎರಚಿದ ಯುವಕ

acid
28/04/2022

ಬೆಂಗಳೂರು: ಯುವಕನೋರ್ವ ಯುವತಿಗೆ ಆಸಿಡ್ ಎರಚಿದ ಘಟನೆ  ನಗರದ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರೀತಿಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಲಾಗಿದೆ ಎನ್ನಲಾಗಿದೆ.

ವರದಿಗಳ ಪ್ರಕಾರ ಫೈನಾನ್ಸ್ ಕಂಪೆನಿ ಕಚೇರಿಯೊಂದರ ಬಳಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಯುವಕ ಪ್ರೀತಿಯ ವಿಚಾರವಾಗಿ ಯುವತಿಯ ಬೆನ್ನುಬಿದ್ದಿದ್ದ. ಈ ವಿಚಾರವಾಗಿ ಪರಸ್ಪರ ಗಲಾಟೆಯೂ ನಡೆದಿತ್ತು ಎನ್ನಲಾಗಿದೆ.

ಗುರುವಾರ ಬೆಳಗ್ಗೆ ಯುವಕ ಯುವತಿಯ ಮೇಲೆ ಆಸಿಡ್ ಎರಚಿದ್ದಾನೆ ಎಂದು ತಿಳಿದು ಬಂದಿದೆ. ಯುವಕ ಹಾಗೂ ಯುವತಿ ಇಬ್ಬರು ಕೂಡ ಪರಸ್ಪರ ಪರಿಚಿತರು ಎಂದು ತಿಳಿದು ಬಂದಿದೆ.

ಆಸಿಡ್ ದಾಳಿಯಿಂದ ಗಾಯಗೊಂಡಿದ್ದ ಯುವತಿಯನ್ನು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಹೊಳೆಗೆ ತೋಟೆ ಹಾಕಿ ಮೀನುಗಳ ಮಾರಣಹೋಮ:  ಮೂವರು ವಶಕ್ಕೆ

ಪ್ರಾಣ ತೆಗೆದ ಕಣ್ಣಮುಚ್ಚಾಲೆ ಆಟ: ಬಾಲಕಿಯರಿಬ್ಬರ ದಾರುಣ ಸಾವು

ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಮತ್ತೋರ್ವ ಗುತ್ತಿಗೆದಾರ!

ಒಟಿಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಸದ್ಯದಲ್ಲೇ ಬಿಡುಗಡೆ: ದಿನಾಂಕ ಪ್ರಕಟ

ಇತ್ತೀಚಿನ ಸುದ್ದಿ