ಮೈಸೂರು ಮೃಗಾಲಯ: ಮೂರು ಮರಿಗಳಿಗೆ ಜನ್ಮ ನೀಡಿದ ಬಿಳಿ ಹುಲಿ ತಾರಾ! - Mahanayaka
7:50 PM Wednesday 15 - October 2025

ಮೈಸೂರು ಮೃಗಾಲಯ: ಮೂರು ಮರಿಗಳಿಗೆ ಜನ್ಮ ನೀಡಿದ ಬಿಳಿ ಹುಲಿ ತಾರಾ!

thara
11/05/2022

ಮೈಸೂರು: ಬರೋಬ್ಬರಿ ಒಂಬತ್ತು ವರ್ಷಗಳ  ನಂತರ ಮೈಸೂರು ಮೃಗಾಲಯದಲ್ಲಿ ಹುಲಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ. ಮೃಗಾಲಯದ ಬಿಳಿ ಹುಲಿ ತಾರಾ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳು ಆರೋಗ್ಯಕರವಾಗಿವೆ.


Provided by

ಗಂಡು ಹುಲಿ ರಾಕಿ ಜೊತೆ ಹೆಣ್ಣು ಹುಲಿ ತಾರಾಗೆ ಬ್ರೀಡ್ ಮಾಡಿಸಲಾಗಿತ್ತು. ಬೇರೆ ಬೇರೆ ಮೃಗಾಲಯಕ್ಕೆ ಪ್ರಾಣಿಗಳ ವಿನಿಮಯದ ಅಡಿಯಲ್ಲಿ ಹುಲಿ ಮರಿಗಳನ್ನ ನೀಡಲು ಬ್ರೀಡ್ ಮಾಡಿಸಲಾಗಿದ್ದು, ಮೂರು ತಿಂಗಳ ಬಳಿಕ ಹುಲಿ ಮರಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ ಎಂದು ಮೃಗಾಲಯದ ನಿರ್ದೇಶಕ ಅಜಿತ್ ಕುಲಕರ್ ತಿಳಿಸಿದ್ರು.

ಮೃಗಾಲಯದಲ್ಲಿ ಒಟ್ಟು 16 ಹುಲಿಗಳಿದ್ದು, ಮೈಸೂರು ಮೃಗಾಲಯ ಹುಲಿ ಸಂತಾನೋತ್ಪತ್ತಿಗೆ ಪೂರಕ ವಾತಾವರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಸಾನಿ ಚಂಡಮಾರುತ: ಸಮುದ್ರದಲ್ಲಿ ತೇಲಿ ಬಂದ ಚಿನ್ನದ ಬಣ್ಣದ ರಥ!

ನೇಣುಬಿಗಿದ ಸ್ಥಿತಿಯಲ್ಲಿ ಸಚಿವರ ಸೊಸೆಯ ಮೃತದೇಹ ಪತ್ತೆ

ಸುಪ್ರಭಾತ ಅಭಿಯಾನದಿಂದ ಹಿಂದಕ್ಕೆ ಸರಿದ ಪ್ರಮೋದ್ ಮುತಾಲಿಕ್

ಮಸೀದಿ, ಚರ್ಚ್, ದೇಗುಲಗಳಲ್ಲಿ ಮೈಕ್ ಬಳಕೆಗೆ ನಿಯಮ ರೂಪಿಸಲಾಗುತ್ತಿದೆ: ಸಚಿವ ಆನಂದ್ ಸಿಂಗ್

ರೈಲಿನಲ್ಲೂ ಲೌಡ್ ಸ್ಪೀಕರ್ ಗೆ ಕಂಟಕ! | ಲೌಡ್ ಸ್ಪೀಕರ್ ನಿಷೇಧಿಸಿದ ರೈಲ್ವೆ ಇಲಾಖೆ

ಇತ್ತೀಚಿನ ಸುದ್ದಿ