ಶ್ರೀಗುರುದತ್ತಾತ್ರೇಯ ಪೀಠದ ಹೋಮ ನಡೆಯುವ ಸ್ಥಳದಲ್ಲಿ ನಾನ್ ವೆಜ್ ಊಟ, ಭಕ್ತರಿಂದ ಆಕ್ರೋಶ - Mahanayaka

ಶ್ರೀಗುರುದತ್ತಾತ್ರೇಯ ಪೀಠದ ಹೋಮ ನಡೆಯುವ ಸ್ಥಳದಲ್ಲಿ ನಾನ್ ವೆಜ್ ಊಟ, ಭಕ್ತರಿಂದ ಆಕ್ರೋಶ

dattathreya pitha
16/05/2022


Provided by

ಚಿಕ್ಕಮಗಳೂರು:  ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿರುವ ಬಾಬಾಬುಡನ್​ಗಿರಿಯ ಶ್ರೀಗುರುದತ್ತಾತ್ರೇಯ ಪೀಠದ ಸ್ಥಳ ಮತ್ತೆ ವಿವಾದಕ್ಕೆ ಕಾರಣವಾಗಿದೆ. ದತ್ತಪೀಠದ ಹೋಮ-ಹವನ ನಡೆಯುವ ಜಾಗದಲ್ಲಿ ಮಾಂಸಹಾರ ಮಾಡಿರೋದು ಸದ್ಯ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಿವಾದಿತ ಸ್ಥಳದಲ್ಲಿ ಜಿಲ್ಲಾಡಳಿತ ಎರಡು ಸಮುದಾಯದ ಜನರಿಗೆ ಉರುಸ್​​ ಹಾಗೂ ದತ್ತಯಾತ್ರೆ ನಡೆಸಲು ಅವಕಾಶ ನೀಡಲಾಗುತ್ತದೆ. ಇದನ್ನು ಹೊರತು ಪಡಿಸಿ ಬೇರೆ ಯಾವುದೇ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಪೂಜೆ ನಡೆಸಲು ಅವಕಾಶ ಇಲ್ಲ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿನ್ನೆ ಇಂತಹ ಘಟನೆ ನಡೆದಿದೆ ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ವಿವಾದಿತ ಸ್ಥಳ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಭಾವೈಕ್ಯತೆಯ ಕೇಂದ್ರವಾಗಿದ್ದು, ವಿವಾದಿತ ಸ್ಥಳವಾಗಿದೆ. ಈ ವಿವಾದ ಕೋರ್ಟ್​​ನಲ್ಲಿ ಇರೋದರಿಂದ ಯಾವುದೇ ನಿಯಮಗಳನ್ನು ಉಲ್ಲಂಟನೆಯನ್ನು ಮಾಡುವಂತಿಲ್ಲ. ಆದರೆ ನಿನ್ನೆ ಪವಿತ್ರ ಸ್ಥಳದಲ್ಲಿ ಮಾಂಸದೂಟ ಮಾಡಿ ಸೇವನೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಹಾಗೂ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಹಿಂದೂ ಪರ ಸಂಘಟನೆಗಳು ಆರೋಪ ಮಾಡಿದ್ದಾರೆ.

ವಿವಾದಿತ ಜಾಗದಲ್ಲಿ ಕೋರ್ಟ್ ಆದೇಶ ಉಲ್ಲಂಘನೆ ಮಾಡಿರುವ ಸಮುದಾಯದ ಕೆಲವರು ಹೋಮ-ಹವನ ನಡೆಯುವ ಸ್ಥಳದಲ್ಲಿ ತಾತ್ಕಾಲಿಕ ಶೆಡ್ ಹಾಕಿ ಮಾಂಸಹಾರ ತಯಾರಿಸಿದ್ದಾರೆ. ಅಲ್ಲದೇ ದತ್ತಪೀಠದ ಗೋರಿಗಳಿಗೆ ಪೂಜೆ ಮಾಡಿದ್ದಾರೆ ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಹೋಮ-ಹವನ ನಡೆಯುವ ಸ್ಥಳದಲ್ಲಿ ಬಿರಿಯಾನಿ ತಯಾರು ಮಾಡಲು ಅವಕಾಶ ನೀಡಿದಕ್ಕೆ ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬುದ್ಧ ಪೂರ್ಣಿಮೆ: ನೇಪಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ

ಮಗಳನ್ನು ಸಾಕಲು 36 ವರ್ಷಗಳಿಂದ ಪುರುಷ ವೇಷ ಧರಿಸಿ ಬದುಕುತ್ತಿರುವ ಮಹಿಳೆ!

ಬಾಲಕಿಗೆ ಡಿಕ್ಕಿ ಹೊಡೆದ ಪಿಕಪ್ ಚಾಲಕನನ್ನು ಸಜೀವ ದಹನ ಮಾಡಿದ ಗ್ರಾಮಸ್ಥರು

ಬಾಹ್ಯಾಕಾಶದಿಂದ ಬಿದ್ದ ಬೃಹತ್ ಲೋಹದ ಚೆಂಡುಗಳು: ಬೆಚ್ಚಿಬಿದ್ದ ಜನ

ಶಾಸಕ ಜಿ.ಟಿ. ದೇವೇಗೌಡರ ಮೊಮ್ಮಗಳು ನಿಧನ: ಕಂಬನಿ ಮಿಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ.ಶಿ.

ಇತ್ತೀಚಿನ ಸುದ್ದಿ