ಜ್ಞಾನವಾಪಿ ಮಸೀದಿಯೊಳಗೆ 12 ಅಡಿ ಶಿವಲಿಂಗ ಹಾಗೂ ನಂದಿ ಪತ್ತೆ: ನಾಳೆ ಕೋರ್ಟ್ ಗೆ ವರದಿ - Mahanayaka
2:23 PM Wednesday 15 - October 2025

ಜ್ಞಾನವಾಪಿ ಮಸೀದಿಯೊಳಗೆ 12 ಅಡಿ ಶಿವಲಿಂಗ ಹಾಗೂ ನಂದಿ ಪತ್ತೆ: ನಾಳೆ ಕೋರ್ಟ್ ಗೆ ವರದಿ

jnanavapi masque
17/05/2022

ಉತ್ತರ ಪ್ರದೇಶ: ವಿವಾದಿತ ಜ್ಞಾನವಾಪಿ ಮಸೀದಿಯೊಳಗೆ ಕೋರ್ಟ್‌ ಆದೇಶದಂತೆ ವಿಡಿಯೋ ಚಿತ್ರೀಕರಣ ಶೇ.65ರಷ್ಟು ಮುಗಿದಿದ್ದು, ಅಧಿಕಾರಿಗಳು ಇದರ ವರದಿಯನ್ನು ಕೋರ್ಟ್‌ಗೆ  ನಾಳೆ (ಮಂಗಳವಾರ )ಸಲ್ಲಿಸಲಿದ್ದಾರೆ.


Provided by

ಇಂಡಿಯಾ ಟುಡೇ’ ಪತ್ರಿಕೆ ವರದಿ ಮಾಡಿದ ಪ್ರಕಾರ ಸಮೀಕ್ಷೆ ಸಮಯದಲ್ಲಿ ಮಸೀದಿಯಲ್ಲಿ ಶಿವಲಿಂಗ ಹಾಗೂ ನಂದಿ ಕಂಡುಬಂದಿರುವುದಾಗಿ ವರದಿಯಾಗಿದೆ.

ನಂದಿಯ ಎದುರಿನಲ್ಲಿರುವ ಬಾವಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಪರ ವಕೀಲರು ಮಾಹಿತಿ ನೀಡಿದ್ದಾಗಿ ವರದಿ ಆಗಿದೆ.

ಮಸೀದಿ ಸಮುಚ್ಚಯದಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಸಮೀಕ್ಷೆಯು 10:15ಕ್ಕೆ ಮುಕ್ತಾಯವಾಗಿದೆ. ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಂತೆ ಜ್ಞಾನವಾಪಿ ಮಸೀದಿ ಇದೆ. ಜ್ಞಾನವಾಪಿ ಮಸೀದಿಯ ಹೊರಗೋಡೆಯಲ್ಲಿರುವ ಕೆಲ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಮಹಿಳೆಯರ ತಂಡವೊಂದು ಅನುಮತಿ ಕೋರಿದೆ.

ಕೋರ್ಟ್‌ ಆದೇಶದ ಮೇರೆಗೆ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ. ಕೋರ್ಟ್ ಸೂಚನೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ಶೇ.65ರಷ್ಟು ಸಮೀಕ್ಷೆ ಕಾರ್ಯ ಮುಗಿದಿದ್ದು, ಮಂಗಳವಾರ ಈ ಕುರಿತು ವರದಿ ಸಲ್ಲಿಸುತ್ತಿದ್ದೇವೆ ಎಂದು ವಕೀಲರು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದೇವಸಹಾಯಂ ಪಿಳ್ಳೈ ಪೋಪ್ ಫ್ರಾನ್ಸಿಸ್  “ಸಂತ” ಎಂದು ಘೋಷಣೆ

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಎಂದು ಅಕ್ಕನಿಂದಲೇ ತಮ್ಮನ ಹತ್ಯೆ!

ಫ್ಯಾಟ್ ಸರ್ಜರಿ ವೇಳೆ ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಸಾವು

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಎತ್ತಂಗಡಿ

ಇತ್ತೀಚಿನ ಸುದ್ದಿ