ಇವ್ರು ನೋಡಿದ್ರಾ? ಸುಮ್ ಸುಮ್ನೇ ಕ್ರಿಯೇಟ್ ಮಾಡ್ತಾರೆ: ವಿಪಕ್ಷಗಳ ವಿರುದ್ಧ ಈಶ್ವರಪ್ಪ ಕಿಡಿ - Mahanayaka
9:15 PM Wednesday 10 - September 2025

ಇವ್ರು ನೋಡಿದ್ರಾ? ಸುಮ್ ಸುಮ್ನೇ ಕ್ರಿಯೇಟ್ ಮಾಡ್ತಾರೆ: ವಿಪಕ್ಷಗಳ ವಿರುದ್ಧ ಈಶ್ವರಪ್ಪ ಕಿಡಿ

eshwarappa
22/05/2022

ಶಿವಮೊಗ್ಗ: ಪಠ್ಯಪುಸ್ತಕದಲ್ಲಿ ಭಗತ್ ಸಿಂಗ್, ನಾರಾಯಣ ಗುರು ಹೆಸರು ತೆಗೆದರು ಎಂದರು‌. ಇವರು ನೋಡಿದ್ದಾರಾ‌.? ಸುಮ್ ಸುಮ್ನೆ ಕ್ರೀಯೆಟ್ ಮಾಡ್ತಾರೆ ಅಂತ, ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಎಸ್.ಈಶ್ವರಪ್ಪ ವಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


Provided by

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕಾರಣಕ್ಕೂ ಕೂಡ ನಾರಾಯಣ ಗುರು ಮತ್ತು ಹಾಗೆಯೇ ಭಗತ್ ಸಿಂಗ್ ಹೆಸರು ಕೂಡ ತೆಗೆಯಲ್ಲ. ಡಾ. ಹೆಡ್ಗೆವಾರ್ ಅವರ ರಾಷ್ಟ್ರಭಕ್ತಿ ವಿಚಾರವನ್ನು ಕೂಡ ಪಠ್ಯದಲ್ಲಿ ಹಾಕುತ್ತಿದ್ದೇವೆ ಎಂದರು.

1925ರಲ್ಲಿ ಆರ್​ ಎಸ್ ಎಸ್ ಸ್ಥಾಪನೆ ಆಗಿಲ್ಲ ಎಂದರೆ ದೇಶ ಯಾವ ಸ್ಥಿತಿಯಲ್ಲಿ ಇರುತ್ತಿತ್ತು. ಕೆಲವು ಮುಸಲ್ಮಾನರು ದಂಗೆ ಎಬ್ಬಿಸುವ ಕೆಲಸ ಮಾಡುತ್ತಿದ್ದರು ಎಂದು ಅವರು ಹೇಳಿದರು.

ಹಿಂದೂ ಸಮಾಜವನ್ನು ರಕ್ಷಣೆ ಮಾಡುವ ಉದ್ದೇಶದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ.  ಹೆಡ್ಗೆವಾರ್ ಆರ್​ ಎಸ್ ಎಸ್ ಸ್ಥಾಪನೆ ಮಾಡದಿದ್ದರೆ ಹಿಂದೂಗಳು ಬಲಹೀನ ಸ್ಥಿತಿಯಲ್ಲಿ ಇರಬೇಕಿತ್ತು ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಪಘಾತದಲ್ಲಿ ಮೃತಪಟ್ಟ 9 ಮಂದಿಯ ಕುಟುಂಬಸ್ಥರಿಗೆ 5 ಲಕ್ಷ ರೂ ಪರಿಹಾರ: ಬೊಮ್ಮಾಯಿ

ಸ್ವಿಚ್ ಬೋರ್ಡ್ ಗೆ ಕೈ ಹಾಕಿದ ಮಗುವಿನ ದಾರುಣ ಸಾವು!

ತಂಪು ಪಾನೀಯದ ಮುಚ್ಚಳ ಗಂಟಲಲ್ಲಿ ಸಿಕ್ಕಿಕೊಂಡು ಪಿಯುಸಿ ವಿದ್ಯಾರ್ಥಿ ಸಾವು

ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಯುವಕ ಯುವತಿ ಆತ್ಮಹತ್ಯೆಗೆ ಶರಣು!

ಇತ್ತೀಚಿನ ಸುದ್ದಿ