ಲಾರಿಯಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳ ಸಾಗಾಟ:  ಇಬ್ಬರು ಪೊಲೀಸ್ ವಶಕ್ಕೆ - Mahanayaka
10:03 PM Tuesday 9 - September 2025

ಲಾರಿಯಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳ ಸಾಗಾಟ:  ಇಬ್ಬರು ಪೊಲೀಸ್ ವಶಕ್ಕೆ

januvaru
01/06/2022

ಕಾರವಾರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಲಾರಿ ಮೇಲ್ಭಾಗದಲ್ಲಿ ಮೂಟೆಗಳನ್ನು ಇಟ್ಟು ಸುತ್ತಲೂ ತಾಡಪತ್ರೆಯಿಂದ ಪ್ಯಾಕ್ ಮಾಡಿ ಒಳಗೆ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 8 ಜಾನುವಾರುಗಳನ್ನು ರಕ್ಷಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.


Provided by

ತಾಡಪತ್ರೆಯಲ್ಲಿ ಪ್ಯಾಕ್ ಮಾಡಿಕೊಂಡು ತೆರಳುತ್ತಿರುವಾಗ ಹೊನ್ನಾವರದಲ್ಲಿ ಪೊಲೀಸರು ತಡೆದಿದ್ದರು.  ಲಾರಿ ಪ್ಯಾಕಿಂಗ್ ಬಗ್ಗೆ ಅನುಮಾನಗೊಂಡ ಪೊಲೀಸರು ಬಿಚ್ಚಿಸಿ ನೋಡಿದಾಗ ಈ ವೇಳೆ 5 ಕೋಣ ಮತ್ತು 3 ಗೂಳಿಗಳನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ತಕ್ಷಣ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.ಇವರಲ್ಲಿ ಯಾವುದೇ ಅಧಿಕೃತ ಪಾಸ್ ಪರ್ಮಿಟ್ ಇರಲಿಲ್ಲ ಎಂದು ತಿಳಿದು ಬಂದಿದೆ.

ಜಾನುವಾರುಗಳನ್ನು ಮಹಾರಾಷ್ಟ್ರದಿಂದ ಭಟ್ಕಳ ತಾಲೂಕಿಗೆ ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಹೊನ್ನಾವರದ ಗೇರುಸೋಪ್ಪದ ಸರ್ಕಲ್​ ಹತ್ತಿರ ಇರುವ ಪೊಲೀಸ್ ಚೆಕ್ ಪೋಸ್ಟ್​​  ನಲ್ಲಿ ವಾಹನ ತಪಾಸಣೆ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳು ಗುಜರಾತ್​​ ನ ತಹಶೀಲ ಪಟಾನ ಜಿಲ್ಲೆಯ ಲಕ್ಷ್ಮೀಪುರದ ಅಸ್ಥಾಕಬಾಯ್, ಜೂನೈದಬಾಯ್ ಎಂದು ಗುರುತಿಸಲಾಗಿದೆ. ಹೊನ್ನಾವರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

3 ವರ್ಷದ ಬಾಲಕಿ ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ: ಬಾಲಕನ ಕೃತ್ಯ ಸಮರ್ಥಿಸಿದ ತಂದೆ

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಳಿಕೆ: ಇಂದಿನಿಂದಲೇ ಅನ್ವಯ

ಶಿಕ್ಷಕಿಯನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು

ವಿಮಾನ ನಿಲ್ದಾಣದ ಪ್ರದರ್ಶನ ಫಲಕದಲ್ಲಿ ಅಶ್ಲೀಲ ಚಿತ್ರ ಪ್ರಸಾರ!

ಇತ್ತೀಚಿನ ಸುದ್ದಿ