ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ ಯಾತ್ರಿಕರ ಕಾರು ಸೇತುವೆಗೆ ಡಿಕ್ಕಿ: ಇಬ್ಬರು ಸಾವು - Mahanayaka

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ ಯಾತ್ರಿಕರ ಕಾರು ಸೇತುವೆಗೆ ಡಿಕ್ಕಿ: ಇಬ್ಬರು ಸಾವು

subrahmanya
07/06/2022


Provided by

ಸುಬ್ರಹ್ಮಣ್ಯ: ರಾಮನಗರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಯಾತ್ರಿಕರ ಕಾರೊಂದು ಕುಕ್ಕೆ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಚೇರು ಎಂಬಲ್ಲಿ ಅಪಘಾತಕ್ಕೀಡಾಗಿದೆ.

ಚಲಿಸುತ್ತಿದ್ದ ಕಾರು ಕಿರು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಉಳಿದ ನಾಲ್ವರು ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ.

ಅಪಘಾತದಲ್ಲಿ ಕಾರಿನಲ್ಲಿದ್ದ ನಾಗೇಶ್(32) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದು, ಬಾಲಕಿ ತೇಜಸ್ವಿನಿ(14) ಪುತ್ತೂರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಕಾರಿನಲ್ಲಿದ್ದ ಚಾಲಕ ರವಿ (30), ರಜನಿ (24), ರಂಜಿತ್ (24), ಅಚಿಂತ್ಯಾ (8) ಹಾಗೂ ಒಂದು ಪುಟ್ಟ ಮಗುವಿಗೆ ಗಾಯಗಳಾಗಿವೆ. ಎಲ್ಲರೂ ಒಂದೇ ಕುಟುಂಬದವರಾಗಿದ್ದು, ಒಟ್ಟು ಏಳು ಮಂದಿ ರಾಮನಗರದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೊರಟಿದ್ದರು.

ಪುತ್ತೂರಿನ ಆಸ್ಪತ್ರೆಯಿಂದ ಮಗುವಿನ ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು, ನಾಗೇಶ್ ಅವರ ಮೃತದೇಹವನ್ನು ಕಡಬದ ಶವಾಗಾರದಲ್ಲಿ ಇರಿಸಲಾಗಿದೆ. ಇಲ್ಲಿ ಮೃತದೇಹಗಳ ಮಹಜರು ನಡೆಸಿ ಮೃತರ ಊರಿಗೆ ಕಳುಹಿಸಲಾಗುವುದು ಎಂದು ಕಡಬ ಪೊಲೀಸರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಿಕ್ಷಣ ಒಂದು ಧರ್ಮದ ತಳಹದಿಯಲ್ಲಿ ಇರಬಾರದು ಎಂದು ಅಂಬೇಡ್ಕರ್ ಹೇಳಿದ್ದರು: ರುಕ್ಮಯ ಎಂ. ಕಕ್ಕೆಪದವು

7,500 ಕೆ.ಜಿ. ಹಳೆಯ ಮೀನು ವಶಕ್ಕೆ ಪಡೆದುಕೊಂಡ ಆಹಾರ ಸುರಕ್ಷತಾ ಅಧಿಕಾರಿಗಳು: ಮೀನಿನಲ್ಲೂ ವಿಷ!

ಪ್ರವಾದಿ ವಿರುದ್ಧ ಹೇಳಿಕೆ: ಮುಸ್ಲಿಮ್ ರಾಷ್ಟ್ರಗಳ ಖಂಡನೆ ಬೆನ್ನಲ್ಲೇ ತನ್ನ ನಿಲುವು ಸ್ಪಷ್ಟಪಡಿಸಿದ ಭಾರತ

ಕ್ಯಾಥೋಲಿಕ್  ಚರ್ಚ್ ಮೇಲೆ ಬಂದೂಕುಧಾರಿಗಳಿಂದ ದಾಳಿ: 50 ಮಂದಿಯ ಭೀಕರ ಹತ್ಯೆ

ಇತ್ತೀಚಿನ ಸುದ್ದಿ