ರಾಜ್ಯಸಭೆ ಕದನ ಶುರು: ವಿಧಾನಸೌಧಕ್ಕೆ ಆಗಮಿಸಿ ಮತಚಲಾಯಿಸುತ್ತಿರುವ ಶಾಸಕರು - Mahanayaka

ರಾಜ್ಯಸಭೆ ಕದನ ಶುರು: ವಿಧಾನಸೌಧಕ್ಕೆ ಆಗಮಿಸಿ ಮತಚಲಾಯಿಸುತ್ತಿರುವ ಶಾಸಕರು

rajyasabha election
10/06/2022


Provided by

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಸೇರಿದಂತೆ ದೇಶದ 4 ರಾಜ್ಯಗಳ 16 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು, ವಿಧಾನ ಸಭಾ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯುತ್ತಿದೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಸ್ವತಂತ್ರ ಶಾಸಕರು ವಿಧಾನಸೌಧಕ್ಕೆ ಆಗಮಿಸಿ ಮತದಾನ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೆ ಎಸ್ ಈಶ್ವರಪ್ಪ ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟು 224 ಶಾಸಕರು ಮತ ಚಲಾಯಿಸಲಿದ್ದಾರೆ.

ಇನ್ನೂ ಜೆಡಿಎಸ್ ನ ಬಂಡಾಯ ಶಾಸಕ ಗುಬ್ಬಿ ಶ್ರೀನಿವಾಸ್ , ಜೆಡಿಎಸ್ ನ ಅಧಿಕೃತ ಅಭ್ಯರ್ಥಿ ಕುಪೆಂದ್ರ ರೆಡ್ಡಿಯವರಿಗೆ ಮತ ಹಾಕಿರುವುದಾಗಿ ತಿಳಿಸಿದ್ದಾರೆ.  ಅವರ ಮತ ಅಡ್ಡಮತದಾನವಾಗಲಿದೆ ಎಂದ ಹೇಳಲಾಗಿತ್ತು.

ಇಂದು ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಮತದಾನ ಸಂಜೆ  4 ಗಂಟೆಯವರೆಗೆ ನಡೆಯಲಿದೆ. ಸಂಜೆ 6ರ ವೇಳೆಗೆ ಮತ ಎಣಿಕೆಯಾಗಲಿದ್ದು, ಇಂದೇ ಫಲಿತಾಂಶ ಪ್ರಕಟವಾಗಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾರು ತಡೆದಿದ್ದಕ್ಕೆ ಪೊಲೀಸರ ಮೇಲೆ ಕಿರುಚಾಡಿದ ಅರವಿಂದ ಲಿಂಬಾವಳಿ ಪುತ್ರಿ! | 10 ಸಾವಿರ ದಂಡ ವಿಧಿಸಿದ ಪೊಲೀಸರು!

ಎನ್ ಎಸ್ ಯುಐ ಕಾರ್ಯಕರ್ತರ ಬಿಡುಗಡೆ: “ನಾಡಿಗಾಗಿ ಜೈಲಿಗೆ ಹೋಗಿದ್ದಕ್ಕೆ ಹೆಮ್ಮೆಯಿದೆ”

ಉದ್ಘಾಟನೆ ವೇಳೆಯೇ ಕುಸಿದು ಬಿದ್ದ ಸೇತುವೆ: ಮೇಯರ್ ಸಹಿತ 8 ಮಂದಿಗೆ ಗಾಯ!

ತರಗತಿಯಲ್ಲಿ ಸಾವರ್ಕರ್ ಫೋಟೋ: ಮಂಗಳೂರಿನ  ಕಾಲೇಜಿನಲ್ಲಿ ಮತ್ತೊಂದು ವಿವಾದ!

ಇತ್ತೀಚಿನ ಸುದ್ದಿ