ಮನೆ ಮಾಲಿಕ ಸುಖ ನಿದ್ದೆಯಲ್ಲಿದ್ದ: ಹಸಿದು ಬಂದ ಆನೆ ಗೋಡೆಯನ್ನೇ ಒಡೆದು ಹಾಕಿತು! - Mahanayaka
12:51 AM Saturday 6 - September 2025

ಮನೆ ಮಾಲಿಕ ಸುಖ ನಿದ್ದೆಯಲ್ಲಿದ್ದ: ಹಸಿದು ಬಂದ ಆನೆ ಗೋಡೆಯನ್ನೇ ಒಡೆದು ಹಾಕಿತು!

neelagiri
29/06/2022

ತಮಿಳುನಾಡು: ಮನೆ ಮಾಲಿಕ ರಾತ್ರಿ ವೇಳೆ ಸುಖ ನಿದ್ದೆಯಲ್ಲಿದ್ದ. ಕಾಡಿನಿಂದ ಆಹಾರ ಅರಸಿ ಬಂದ ಆನೆ ತೀವ್ರವಾಗಿ ಹಸಿದಿತ್ತು. ಮನೆಯ ಸಮೀಪ ಬಂದ ಆನೆ ನೇರವಾಗಿ ಅಡುಗೆ ಮನೆ ಕಡೆಗೆ ಹೆಜ್ಜೆ ಹಾಕಿದ್ದು, ಅಡುಗೆ ಮನೆಯ ಗೋಡೆ ಒಡೆದು ಹಾಕಿ ತನಗೆ ಬೇಕಾದ ಆಹಾರವನ್ನು ಆನೆ ತೆಗೆದುಕೊಂಡು ಹೋಗಿದೆ.


Provided by

ಈ ಘಟನೆ ನಡೆದಿರೋದು ತಮಿಳುನಾಡಿನ ನೀಲಗಿರಿಯಲ್ಲಿ. ಈ ಘಟನೆಯ ನಂತರ ಆನೆ ಗೋಡೆಯನ್ನು ಒಡೆದು ಹಾಕಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸಿಸಿ ಕ್ಯಾಮರದಲ್ಲಿ ವಿಡಿಯೋ ಸೆರೆಯಾಗಿದೆ.

ಮನೆಗೆ ಬಂದ ಆನೆ ಮೊದಲು ಸೊಂಡಿಲನ್ನು ಅಡುಗೆ ಕೋಣೆಗೆ ನುಗ್ಗಿಸಿದ್ದು, ಬಳಿಕ ಪಾತ್ರೆಯಲ್ಲಿರುವ ವಸ್ತುಗಳನ್ನು ಪರೀಕ್ಷಿಸಲು ಆರಂಭಿಸಿದೆ. ಸೊಂಡಿಲಿಗೆ ಸಿಕ್ಕಿದ ಗ್ಯಾಸ್ ಸಿಲಿಂಡರ್ ನ್ನು  ಬದಿಗೆ ಸರಿಸಿದ ಆನೆ ಕೊನೆಗೆ ಮನೆಯ ಮೂಲೆಯಲ್ಲಿ ಸಿಕ್ಕಿದ ಆಹಾರ ಚೀಲದೊಂದಿಗೆ ಆನೆ ಕಾಡಿಗೆ ಹಿಂದಿರುಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಿದ್ಯಾರ್ಥಿನಿಯರ ತಾಯಂದಿರಿಗೆ ಅಶ್ಲೀಲ ಸಂದೇಶ ರವಾನಿಸಿದ ಶಿಕ್ಷಕ ಅಮಾನತು!

ಗೂಳಿ ಕಾಳಗದ ವೇಳೆ  ನಾಲ್ವರು ಸಾವು: ಕನಿಷ್ಠ 300 ಮಂದಿ ಗಾಯ

ಕೈಗಳನ್ನು ಕಟ್ಟಿಕೊಂಡು 780 ಮೀಟರ್ ಅಗಲದ ನದಿಯನ್ನು ಈಜಿ ದಾಟಿದ ವೃದ್ಧೆ!

ಹೀನಾಯ ಸೋಲಿನ ನಂತರ ಒಟಿಟಿಗೆ ಕಾಲಿಟ್ಟ ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’!

 

ಇತ್ತೀಚಿನ ಸುದ್ದಿ