ರೈತನ ಮೂಗಿನೊಳಗೆ ಸಿಲುಕಿಕೊಂಡ ಜೀವಂತ ಸೀಗಡಿ! - Mahanayaka
3:43 AM Saturday 18 - October 2025

ರೈತನ ಮೂಗಿನೊಳಗೆ ಸಿಲುಕಿಕೊಂಡ ಜೀವಂತ ಸೀಗಡಿ!

prown
12/07/2022

ರೈತನ ಮೂಗಿನಲ್ಲಿ ಜೀವಂತ ಸೀಗಡಿ ಸಿಲುಕಿಕೊಂಡ ಘಟನೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಗಣಪವರತ್ ನಲ್ಲಿ ನಡೆದಿದೆ.  ಸತ್ಯನಾರಾಯಣ ಎಂಬ ರೈತ ತನ್ನ ಜಮೀನಿನ ಕೆರೆಯ ಪಕ್ಕದಲ್ಲಿ ನಿಂತಿದ್ದ ಈ ವೇಳೆ ಸೀಗಡಿಯು ಕೊಳದಿಂದ ಜಿಗಿದು ಈತನ ಮೂಗಿನೊಳಗೆ ಪ್ರವೇಶಿಸಿತು.


Provided by

ಸೀಗಡಿ ಮೂಗಿಗೆ ಪ್ರವೇಶಿಸಿದ ತಕ್ಷಣ ತನ್ನ ಮೂಗಿನಿಂದ ಸೀಗಡಿಯನ್ನು ಹೊರತೆಗೆಯಲು ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ ಅದು ಮತ್ತಷ್ಟು ಒಳಗಡೆ ಪ್ರವೇಶಿಸಿತು.  ಇದರಿಂದ ಸತ್ಯನಾರಾಯಣ್ ಅವರಿಗೆ ಉಸಿರಾಟದ ತೊಂದರೆ ಉಂಟಾಗಲು ಶುರುವಾಯಿತು.

ಕೂಡಲೇ ಜೊತೆಗಿದ್ದ ರೈತ ಸತ್ಯನಾರಾಯಣ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು.  ಘಟನೆಯನ್ನು ವೈದ್ಯರಿಗೂ ವಿವರಿಸಲಾಗಿದೆ. ತಕ್ಷಣವೇ ವೈದ್ಯರು ಸತ್ಯನಾರಾಯಣ್‌ ಗೆ ಚಿಕಿತ್ಸೆ ನೀಡಿದರು. ಎಂಡೋಸ್ಕೋಪಿ ಮೂಲಕ ಸೀಗಡಿ ಇರುವ ಸ್ಥಳವನ್ನು ಪತ್ತೆ ಹಚ್ಚಿ ಮೂಗಿನೊಳಗೆ ಸೇರಿದ್ದ ಸೀಗಡಿಯನ್ನು ಹೊರತೆಗೆದಿದ್ದಾರೆ.

ಸೀಗಡಿಯನ್ನು ಹೊರತೆಗೆದಾಗಲು ಸೀಗಡಿಯು ಜೀವಂತವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.  ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದರಿಂದಲೇ ಸತ್ಯನಾರಾಯಣ ಬದುಕುಳಿದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ವಿವರಿಸಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ