ಸೈನಿಕ ಶಿಬಿರದಲ್ಲಿ ಸಹೋದ್ಯೋಗಿಗಳಿಗೆ ಗುಂಡು ಹಾರಿಸಿ, ಆತ್ಮಹತ್ಯೆಗೆ ಶರಣಾದ ಸೈನಿಕ - Mahanayaka
10:14 AM Thursday 21 - August 2025

ಸೈನಿಕ ಶಿಬಿರದಲ್ಲಿ ಸಹೋದ್ಯೋಗಿಗಳಿಗೆ ಗುಂಡು ಹಾರಿಸಿ, ಆತ್ಮಹತ್ಯೆಗೆ ಶರಣಾದ ಸೈನಿಕ

gun
17/07/2022


Provided by

ಜಮ್ಮು ಕಾಶ್ಮೀರದ ಉಧಮ್‌ ಪುರ ಜಿಲ್ಲೆಯ ಸೈನಿಕ ಶಿಬಿರವೊಂದರಲ್ಲಿ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಜವಾನ ತನ್ನ ಮೂವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ, ಬಳಿಕ ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟ ಅಘಾತಕಾರಿ ಘಟನೆ  ನಡೆದಿದೆ

ಯೋಧರು 8 ನೇ ಬೆಟಾಲಿಯನ್‌ ಗೆ ಸೇರಿದವರಾಗಿದ್ದು, ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಕರ್ತವ್ಯಗಳಿಗಾಗಿ ನಿಯೋಜಿಸಲಾದ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ನ 2ನೇ ಬೆಟಾಲಿಯನ್‌ ನ ‘ಎಫ್’ ಕಂಪನಿಗೆ ಸೇರಿದವರಾಗಿದ್ದಾರೆ.

ಈ ಜವಾನರ ನಡುವೆ ಘಾಟನೆಗಿಂತ ಮೊದಲು ವಾಗ್ವಾದ ನಡೆದಿತ್ತು ಎಂದು ಪ್ರಾಥಮಿಕ ಮಾಹಿತಿಗಳಲ್ಲಿ ತಿಳಿದಬಂದಿದೆ.

ಕಾನ್‌ ಸ್ಟೆಬಲ್ ಭೂಪೇಂದ್ರ ಸಿಂಗ್ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ದೇವಿಕಾ ಘಾಟ್ ಸಮುದಾಯ ಕೇಂದ್ರದಲ್ಲಿ ಶನಿವಾರ ಘಟನೆ ಸಂಭವಿಸಿದ್ದು,

ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಕಾರಣವಾದ ನಿಖರವಾದ ಕಾರಣವನ್ನು ಇನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ