ಆನ್ ಲೈನ್ ನಲ್ಲಿ ರಮ್ಮಿ ಆಡಲು ಚಿನ್ನ ಅಡವಿಟ್ಟಳು, ಸಾಲ ಮಾಡಿದ್ಲು, ಪ್ರಾಣವನ್ನೇ ಬಿಟ್ಲು! - Mahanayaka
6:05 PM Wednesday 20 - August 2025

ಆನ್ ಲೈನ್ ನಲ್ಲಿ ರಮ್ಮಿ ಆಡಲು ಚಿನ್ನ ಅಡವಿಟ್ಟಳು, ಸಾಲ ಮಾಡಿದ್ಲು, ಪ್ರಾಣವನ್ನೇ ಬಿಟ್ಲು!

bijisha
23/07/2022


Provided by

ಕೋಯಿಕ್ಕೋಡ್‌: ಆನ್ ಲೈನ್ ರಮ್ಮಿ ಆಟದ ಚಟಕ್ಕೆ ಬಿದ್ದ ಯುವತಿಯೊಬ್ಬಳು ಸಾಕಷ್ಟು ಹಣ ಕಳೆದುಕೊಂಡು, ಸಾಲದ ಸುಳಿಯಲ್ಲಿ ಸಿಲುಕಿ ಕೊನೆಗೆ ತನ್ನ ಜೀವನವನ್ನೇ ಅಂತ್ಯಗೊಳಿಸಿದ ಘಟನೆ  ಕೇರಳದ ಕೋಯಿಕ್ಕೋಡ್‌ ನಲ್ಲಿ ನಡೆದಿದೆ.

ಕೋಯಿಕ್ಕೋಡ್‌ ನ ಚೇಲಿಯಾ ಕೊಯಿಲಂಡಿ ನಿವಾಸಿ ಬಿಜಾಶಾ ಮೃತಪಟ್ಟ ಯುವತಿಯಾಗಿದ್ದು, ಟೆಲಿಕಾಂ ಕಂಪನಿಯ ಉದ್ಯೋಗಿಯಾಗಿದ್ದ ಬಿಜಿಶಾ ಡಿಸೆಂಬರ್ 12 ರಂದು ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಆನ್ ಲೈನ್ ರಮ್ಮಿ ಆಟದ ಚಟಕ್ಕೆ ಬಿದ್ದ ಬಿಜಾಶಾ, 1 ಕೋಟಿಗೂ ಹೆಚ್ಚು ಹಣ ವಹಿವಾಟು ಮಾಡಿದ್ದಾರೆನ್ನಲಾಗಿದೆ. ಆನ್ ಲೈನ್ ನಲ್ಲಿ ನಿರಂತರವಾಗಿ ಆಟವಾಡುತ್ತಿದ್ದ ಬಿಜಾಶಾ ತನ್ನ ಪರಿಚಯಸ್ಥರಿಂದ ಸಾಲ ಮಾಡಿಕೊಂಡಿದ್ದಳು. ಮದುವೆಗಾಗಿ ಮಾಡಿಟ್ಟಿದ್ದ ಚಿನ್ನಾಭರಣಗಳನ್ನು ಅಡವಿರಿಸಿ ಆನ್ ಲೈನ್ ರಮ್ಮಿಯಲ್ಲಿ ಹಣಹೂಡಿ  ಆಟವಾಡಿ ಕಳೆದುಕೊಂಡಿದ್ದಳೆನ್ನಲಾಗಿದೆ.

ಬಿಜಾಶಾ ಆತ್ಮಹತ್ಯೆಗೆ ಒಂದು ಆನ್ ಲೈನ್ ಆ್ಯಪ್ ಕಾರಣ ಎಂದರೆ, ಆಕೆಯ ತಂದೆ ತಾಯಿಗೆ ಈಗಲೂ ಅದನ್ನು ನಂಬಲು ಸಾಧ್ಯವಾಗುತ್ತಿಲ್ಲವಂತೆ, ತಮ್ಮ ಮಗಳ ಸಾವು ನೆನೆದು ತಂದೆ ತಾಯಿಯ ರೊದನೆ ಮುಗಿಲು ಮುಟ್ಟಿದೆ.

ಆನ್ ಲೈನ್ ರಮ್ಮಿ ಅನ್ನೋ ಮೋಸದಾಟಕ್ಕೆ ಯುವ ಜನರು ಸಿಲುಕಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಖ್ಯಾತಿ ಹೊಂದಿರುವವರಿಂದ ನಿರಂತರವಾಗಿ ಜಾಹೀರಾತು ಪ್ರಸಾರ ಮಾಡುತ್ತಿರುವ ಆನ್ ಲೈನ್ ರಮ್ಮಿ ಆ್ಯಪ್ ಗಳು ಅತೀ ಹೆಚ್ಚು ಯುವ ಜನರನ್ನು ದಾರಿ ತಪ್ಪಿಸುತ್ತಿದೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ