ಕಲ್ಲು ಹೊಡೆಸಬಹುದಿತ್ತು ಎಂಬ ಹೇಳಿಕೆ: ಸಂಸದ ತೇಜಸ್ವಿ ಸೂರ್ಯ ನಿವಾಸದ ಮುಂದೆ ಕಾಂಗ್ರೆಸ್ ಪ್ರತಿಭಟನೆ - Mahanayaka
11:57 AM Wednesday 20 - August 2025

ಕಲ್ಲು ಹೊಡೆಸಬಹುದಿತ್ತು ಎಂಬ ಹೇಳಿಕೆ: ಸಂಸದ ತೇಜಸ್ವಿ ಸೂರ್ಯ ನಿವಾಸದ ಮುಂದೆ ಕಾಂಗ್ರೆಸ್ ಪ್ರತಿಭಟನೆ

congress
30/07/2022


Provided by

ADS

ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಸಬಹುದಿತ್ತು ಎಂದು ಹೇಳಿಕೆ  ನೀಡಿ ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿರುವ  ಸಂಸದ ತೇಜಸ್ವಿ ಸೂರ್ಯ ಅವರ ಬೆಂಗಳೂರಿನ ನಿವಾಸದ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತೆ ಮೀನಾ, ಕಾಂಗ್ರೆಸ್ ಸರ್ಕಾರವಿದ್ದಿದ್ದರೆ ಕಲ್ಲು ಹೊಡೆಸಬಹುದಿತ್ತು ಎನ್ನುವ ಮೂಲಕ ಸಂಸದರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ನಮಗವರು ಕಲ್ಲು ಹೊಡೆದರೂ ಪರವಾಗಿಲ್ಲ. ನಾವು ಹೂಗಳನ್ನು ಅವರಿಗೆ ನೀಡುತ್ತೇವೆ ಎಂದಿದ್ದಾರೆ.

ಪ್ರತಿಭಟನಾಕಾರರು ಕಲ್ಲು ಮತ್ತು ಹೂಗಳೊಂದಿಗೆ ಸಂಸದ ತೇಜಸ್ವಿ ಸೂರ್ಯ ಅವರ ಮನೆಗೆ ಮೆರವಣಿಗೆ ಹೊರಟಿದ್ದು, ಕಲ್ಲು ನೀಡಿ ಹೊಡೆಸುವ ಸವಾಲು ಹಾಕಲು ಮತ್ತು ಕಲ್ಲು ಹೊಡೆಯುವ ಮನಸ್ಥಿತಿ ಬೇಡ ಎಂದು ತಿಳಿ ಹೇಳಲು ಹೂಗಳನ್ನು ಉಡುಗೊರೆ ನೀಡಲು ಒಯ್ದಿದ್ದರು. ಆದರೆ ಪೊಲೀಸರು ಅರ್ಧ ದಾರಿಯಲ್ಲೇ  ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದು ಬಂಧಿಸಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದರು.

ಇನ್ನು ಮೀನಾ ಅವರು ಸಂಸದರ ಮನೆಯೊಳಗೆ ಪ್ರವೇಶಿಸಿ ಹೂಗಳನ್ನು ಇಟ್ಟು ಹೊರ ಬಂದಿದ್ದ ವೇಳೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

ADS

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ