ಆಗಸ್ಟ್ 6ರಂದು ಮೂರು ಭಾಷೆಗಳ ಡಿಕ್ಷನರಿ ಬಿಡುಗಡೆ, ರಾಷ್ಟ್ರೀಯ ವಿಚಾರಗೋಷ್ಠಿ - Mahanayaka

ಆಗಸ್ಟ್ 6ರಂದು ಮೂರು ಭಾಷೆಗಳ ಡಿಕ್ಷನರಿ ಬಿಡುಗಡೆ, ರಾಷ್ಟ್ರೀಯ ವಿಚಾರಗೋಷ್ಠಿ

dictionary release
03/08/2022


Provided by

ಮಂಗಳೂರು: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಸಂಪಾದಿಸಿರುವ ಅರೆಭಾಷೆ ಪದಕೋಶ ಅರೆಭಾಷೆ-ಕನ್ನಡ-ಇಂಗ್ಲಿಷ್ ಮೂರು ಭಾಷೆಗಳ ಡಿಕ್ಷನರಿ ಬಿಡುಗಡೆ ಕಾರ್ಯಕ್ರಮ ಮತ್ತು ಅಳಿವಿನಂಚಿನ ಭಾಷೆ  ರಾಷ್ಟ್ರೀಯ ವಿಚಾರಗೋಷ್ಠಿಯು ಆಗಸ್ಟ್ 6 ರಂದು ಮಂಗಳೂರಿನಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ), ಮಂಗಳೂರು, ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್, ಮಂಗಳೂರು, ಸಿಐಎಸ್-ಎ2ಕೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆಯಲಿದೆ.

ಬೆಳಿಗ್ಗೆ 10:30ಕ್ಕೆ ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ) ಇಲ್ಲಿನ ಸಾನಿಧ್ಯ ಸಭಾಂಗಣದಲ್ಲಿ ನಡೆಯಲಿದ್ದು, ಹಂಪಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ. ಬಿ. ಎ. ವಿವೇಕ ಪದಕೋಶ ಬಿಡುಗಡೆ ಮಾಡುವರು. ಮದ್ರಾಸು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚೆ.ರಾಮಸ್ವಾಮಿ ಪದಕೋಶದ ಬಗ್ಗೆ ಮಾತನಾಡುವರು.

ಸಂತ ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ರೆ.ಫಾ, ಮೆಲ್ವಿನ್ ಜೋಸೆಫ್ ಪಿಂಟೊ SJ ಆಶೀರ್ವಾದದ ಮಾತುಗಳನ್ನಾಡುವರು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆ.ಡಾ. ಪ್ರವೀಣ್ ಮಾರ್ಟಿಸ್ SJ ಶುಭನುಡಿಗಳನ್ನಾಡುತ್ತಾರೆ.

ಮಧ್ಯಾಹ್ನದ ನಂತರ 1:30 ರಿಂದ ಅಳಿವಿನಂಚಿನ ಸಣ್ಣ ಭಾಷೆಗಳು ಮತ್ತು ಡಿಕ್ಷನರಿ ವಿಷಯದ ಕುರಿತಂತೆ ಮದ್ರಾಸು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜೆ. ರಾಮಸ್ವಾಮಿಯವರು, ಅಳಿವಿನಂಚಿನ ಭಾಷೆ ಮತ್ತು ಯೋಜನೆಗಳು ವಿಷಯದ ಕುರಿತಂತೆ ವಿಕಿಮೀಡಿಯ ಫೌಂಡೇಶನ್ ಉದ್ಯೋಗಿ ಶ್ರೀ ತನ್ವಿರ್ ಹಸನ್‌ ಹಾಗೂ ಡಿಜಟಲೀಕರಣ, ಮುಕ್ತಜ್ಞಾನ, ಯೂನಿಕೋಡ್ ಮತ್ತು ಅರೆಭಾಷೆ ಫೌಂಡೇಶನ್ ಮತ್ತು ಸಂಚಯ ಬೆಂಗಳೂರಿನ ಶ್ರೀ ಓಂ ಶಿವಪ್ರಕಾಶ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ