ಆಳ್ಶಿರೆಡ್ಡೆ: ಹಾರರ್, ಕಾಮಿಡಿ ಚಿತ್ರದ ಪೋಸ್ಟರ್ ಬಿಡುಗಡೆ - Mahanayaka

ಆಳ್ಶಿರೆಡ್ಡೆ: ಹಾರರ್, ಕಾಮಿಡಿ ಚಿತ್ರದ ಪೋಸ್ಟರ್ ಬಿಡುಗಡೆ

allsh redde
05/08/2022


Provided by

ಮಂಗಳೂರು: ಆಳ್ಶಿರೆಡ್ಡೆ ಎಂಬ ಕೊಂಕಣಿ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆಯಿತು.

ಸ್ಪಾರ್ಕಲ್ ಪ್ರೊಡಕ್ಷನ್ ನಿರ್ಮಾಣದ ಹಾಗೂ ಆರ್‌ ಆರ್ ಫಿಲ್ಮ್  ಇಂಟರ್ನ್ಯಾಷನಲ್ ಮತ್ತು ಯುಯನ್ನ್ ಸಿನಿಮಾಸ್ ಸಹಯೋಗದಲ್ಲಿ ನೂತನ ಕೊಂಕಣಿ ಚಲನಚಿತ್ರ ತೆರೆಗೆ ಬರಲು ಸಿದ್ಧವಾಗಿದೆ ಎಂದು ಚಿತ್ರದ ನಿರ್ದೇಶಕ,  ನಟ ಗೋಡ್ವಿನ್ ಸ್ಪಾರ್ಕಲ್  ತಿಳಿಸಿದರು.

ಪ್ರೆಸ್ ಕ್ಲಬ್ ನಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಚಿತ್ರದ ಚಿತ್ರೀಕರಣ ಎಡಪದವು, ಮಂಗಳೂರು, ಉಡುಪಿ ಹಾಗೂ ಬೆಂಗಳೂರಿನಲ್ಲಿ  ಮಾಡಲಾಗಿದೆ. ಈ ಚಿತ್ರವು ಆಗಸ್ಟ್  ಕೊನೆಯ ವಾರದಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.

ಇದು ಹಾರರ್ ಕಾಮಿಡಿ ಮತ್ತು ಹಾಸ್ಯಭರಿತ ಚಿತ್ರ. ಇದರ ನಿರ್ದೇಶನವನ್ನು ಗೋಡ್ವಿನ್ ಸ್ಪಾರ್ಕಲ್ ಮತ್ತು  ಹೆರ ಪಿಂಟೋ ಮಾಡಿದ್ದಾರೆ. ಸಹಾಯಕ ನಿರ್ದೇಶಕರಾಗಿ ಯತೀಶ್ ಪೂಜಾರಿ ಹಾಗೂ ರಾಯನ್ ಮ್ಯಾಗ್ನೆಟೊ ಸಹಕರಿಸಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಗೋಡ್ವಿನ್ ಸ್ಪಾರ್ಕಲ್, ಹೆರ ಪಿಂಟೋ ನಟಿಸಿದ್ದು,  ದೀಪಕ್ ರೈ ಪಾಣಾಜೆ, ವಿಲಿಯಂ ಪಿಂಟೋ ಪದರೆಂಗಿ, ಮರ್ವಿನ್ ಶಿರ್ವಾ, ಸಂದೀಪ್ ಮಲಾನಿ, ರಿಚರ್ಡ, ಹೆನ್ಲಿ ವಿಶಾಲ್, ಶರಣ್ ಶೆಟ್ಟಿ, ಸಂಪತ್ ಲೋಬೋ, ಸುಮನಾ, ರಾಯನ್ ಮ್ಯಾಗ್ನಿಟೋ, ಇಶಾಂತ್, ಮಹೇಶ್, ಪ್ರಣೀತಾ ಹಾಗು ಇತರ ಕಲಾವಿದರು ಈ ಚಿತ್ರದಲ್ಲಿ ವಿವಿಧ ಪಾತ್ರ ನಿಭಾಯಿಸಿದ್ದಾರೆ.

ಪ್ಯಾಟ್ಸನ್ ಪಿರೇರಾ ಸಂಗೀತ ನಿರ್ದೇಶನ ಮಾಡಿದ್ದು, ವಿಲಿಯಂ ಪಿಂಟೋ ಪದರೆಂಗಿರವರ ಸಂಭಾಷಣೆ ಇದ್ದು ಸ್ಪಾರ್ಕಲ್ ಪ್ರೊಡಕ್ಷನ್ ತಂತ್ರಜ್ಞರು ಹಾಗೂ ಪ್ರಜ್ವಲ್ ಸುವರ್ಣ  ಮತ್ತು ಇರ್ಶನ್ ಅಲಿ ಛಾಯಾಗ್ರಹಣ ಮಾಡಿದ್ದಾರೆ. ಮೆಲ್ವಿನ್ ಮತ್ತು  ಕೃತಿಕ್ ರಾಜ್ ಭಟ್ ಸಹಾಯಕ ಛಾಯಾಗ್ರಹಣ ಜವಾಬ್ದಾರಿ ನಿರ್ವಹಿಸಿದ್ದಾರೆ.

ಬಾಲಿವುಡ್ ಗಾಯಕರಾದ ಕುನಾಲ್ ಗಾಂಜಾವಾಲ, ಮೋಹಿತ್ ಚೌಹಾನ್ ಮತ್ತು ಲವೀಟ ಲೋಬೊ ಹಾಡಿದ್ದಾರೆ. ಸಾಹಿತ್ಯವನ್ನು ವಿಲ್ಸನ್ ಕಟೀಲ್  ಬರೆದಿದ್ದಾರೆ.

ಜೇಸನ್ ಡಿಸೋಜಾ, ಮರ್ವಿನ್ ಸ್ಪಾರ್ಕಲ್, ಶಾನ್ ಡಿಸೋಜಾ ಮತ್ತು ಸುಶನ್ ರೈ ಮಾವಿನಕಟ್ಟೆ ನಿರ್ಮಾಣ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದಾರೆ. ಸಂಕಲನವನ್ನು ರಾಹುಲ್ ವಶಿಷ್ಠ ಮತ್ತು ಪ್ರತೀಶ್ ಕಾಪು ಮಾಡಿದ್ದಾರೆ. ಹಿನ್ನಲೆ ಸಂಗೀತ ಪ್ರಜೋತ್ ಡೇಸಾ ಮತ್ತು ಎಸ್‌ ಎಫ್‌ ಎಕ್ಸ್  ಲೊಯ್ ವ್ಯಾಲೆಂಟೈನ್ ಅವರದ್ದು.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ