ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಕಲ್ಲಿನಕೋರೆಯಲ್ಲಿ ಪತ್ತೆ - Mahanayaka
4:48 AM Saturday 13 - December 2025

ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಕಲ್ಲಿನಕೋರೆಯಲ್ಲಿ ಪತ್ತೆ

situ
16/08/2022

ಬ್ರಹ್ಮಾವರ: ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಬ್ರಹ್ಮಾವರ ತಾಲೂಕಿನ ಯಡ್ತಾಡಿ ಗ್ರಾಮದ ಹಂಚಿನಕೆರೆ ಬಳಿಯ ಕಲ್ಲುಕೋರೆಯಲ್ಲಿ ಆ.15ರಂದು ಮಧ್ಯಾಹ್ನ ನಡೆದಿದೆ.

ಯಡ್ತಾಡಿ ಗ್ರಾಮದ ಹಂಚಿನಕೆರೆ ನಿವಾಸಿ 65ವರ್ಷದ ಸೀತು ಮೃತದುರ್ದೈವಿ. ಇವರು ಆ.13ರಿಂದ ಕಾಣೆಯಾಗಿದ್ದರು. ಇವರು ಪ್ರತಿದಿನ ಬೆಳಿಗ್ಗೆ 5.30ಕ್ಕೆ ದನಕ್ಕೆ ಹುಲ್ಲು ತರಲು ಮನೆಯಿಂದ ಗದ್ದೆಗೆ ಹೋಗುತ್ತಿದ್ದರು.

ಆ. 15ರಂದು ಕೂಡ ಬೆಳಿಗ್ಗೆ ಹುಲ್ಲು ತರಲು ಹೋಗಿದ್ದು, ಅಲ್ಲೆ ಪಕ್ಕದಲ್ಲಿದ್ದ ಕಲ್ಲುಕೋರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ