ಹಿಂಸಾತ್ಮಕವಾಗಿ ಗೋವು ಸಾಗಾಟ: ಸ್ಥಳೀಯರ ಸಹಕಾರದೊಂದಿಗೆ ಮೂವರನ್ನು ಹಿಡಿದ ಪೊಲೀಸರು - Mahanayaka
8:06 AM Wednesday 20 - August 2025

ಹಿಂಸಾತ್ಮಕವಾಗಿ ಗೋವು ಸಾಗಾಟ: ಸ್ಥಳೀಯರ ಸಹಕಾರದೊಂದಿಗೆ ಮೂವರನ್ನು ಹಿಡಿದ ಪೊಲೀಸರು

belthangady
18/08/2022


Provided by

ಬೆಳ್ತಂಗಡಿ: ಕ್ವಾಲಿಸ್ ವಾಹನವೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಸಾಗಿಸುತ್ತಿದ್ದುದನ್ನು ಸ್ಥಳೀಯರ ಸಹಕಾರದಲ್ಲಿ  ಪೊಲೀಸರು  ಹಿಡಿದ ಘಟನೆ ನಡ ಗ್ರಾಮದ ನರಸಿಂಹ ಗಡ ರಸ್ತೆಯಲ್ಲಿ ನಡೆದಿದೆ.

ಕ್ವಾಲೀಸ್ ವಾಹನವೊಂದು ಸಂಶಯಸ್ಪದವಾಗಿ ಸಂಚಾರಿಸುತಿದ್ದ ಬಗ್ಗೆ  ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ವಾಹನವನ್ನು ನಿಲ್ಲಿಸಲು ಸೂಚಿಸಿದರೂ ಪೊಲೀಸರ ಮೇಲೆಯೇ ವಾಹನ ಚಲಾಯಿಸಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಾಗ ಸ್ಥಳೀಯರ ಸಹಕಾರದಲ್ಲಿ ಪೊಲೀಸರು ವಾಹನವನ್ನು ತಡೆದಿದ್ದಾರೆ . ಆಗ ಚಾಲಕ ತಪ್ಪಿಸಿಕೊಂಡಿದ್ದು, 3 ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಾಹನದಲ್ಲಿ ಎರಡು ದನಗಳು ಹಾಗೂ ಒಂದು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ‌ಸಾಗಾಟ ಮಾಡುತ್ತಿದ್ದು  ಇದ್ದು ಅದನ್ನು ಕಸಾಯಿಖಾನೆಗೆ ಸಾಗಿಸಲು ಯತ್ತಿಸುತಿದ್ದರು .  ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ