100 ವರ್ಷ ಕಳೆದಿದ್ದರೂ ಡ್ರೈವ್ ಮಾಡುತ್ತಿದ್ದ ನಿವೃತ್ತ ಸೈನಿಕ ಶತಾಯುಷಿ ಮೈಕಲ್ ಡಿಸೋಜಾ ನಿಧನ - Mahanayaka
11:59 PM Saturday 23 - August 2025

100 ವರ್ಷ ಕಳೆದಿದ್ದರೂ ಡ್ರೈವ್ ಮಾಡುತ್ತಿದ್ದ ನಿವೃತ್ತ ಸೈನಿಕ ಶತಾಯುಷಿ ಮೈಕಲ್ ಡಿಸೋಜಾ ನಿಧನ

michael dsouza
10/09/2022


Provided by

100 ವರ್ಷ ಕಳೆದಿದ್ದರೂ ಮಂಗಳೂರಿನಲ್ಲಿ ಅತ್ಯಂತ ನಾಜೂಕಾಗಿ ಡ್ರೈವ್‌ ಮಾಡುತ್ತಿದ್ದ, ಮಂಗಳೂರಿನ ನಿವೃತ್ತ ಸೈನಿಕ, ಶತಾಯುಷಿ ಮೈಕಲ್ ಡಿಸೋಜಾ (108)  ಅವರು ನಿಧನರಾಗಿದ್ದಾರೆ.

ಮದ್ರಾಸ್‌ ಸರ್ಕಾರದಲ್ಲಿ ಮೆಕ್ಯಾನಿಕಲ್ ಕಮ್ ಡ್ರೈವರ್ ಆಗಿ ಸೇನೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸೈನ್ಯದಲ್ಲಿ 10 ವರ್ಷ ಸೇವೆಯ ನಂತರ ಲೋಕೋಪಯೋಗಿ ಇಲಾಖೆಗೆ ಸೇರಿ ಉಡುಪಿ ರಥಬೀದಿಯ ಕಾಂಕ್ರೀಟ್ ರಸ್ತೆ, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಮಂಗಳೂರಿನ ಕೂಳೂರು ಸೇತುವೆ, ಮಲ್ಪೆ ಕಲ್ಮಾಡಿ ಸೇತುವೆ, ಬೈಂದೂರಿನ ಸೇತುವೆಗಳು, ಉಭಯ ಜಿಲ್ಲೆಗಳ ಅನೇಕ ಹಳೆಯ ಸೇತುವೆಗಳನ್ನು ನಿರ್ಮಿಸುವಾಗ ತಮ್ಮನ್ನು ತೊಡಗಿಸಿಕೊಂಡಿದ್ದರು.

michael dsouza

ಮಕ್ಕಳಿಲ್ಲದ ಅವರು ಪರ್ಕಳದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಶತಾಯುಷಿ ಆಗಿದ್ದರೂ ಅವರ ಕಣ್ಣಿನ ದೃಷ್ಟಿ ಉತ್ತಮವಾಗಿತ್ತು. 2024ರ ತನಕ ಮಂಗಳೂರಿನ ಆರ್‌ ಟಿಒ ಅವರಿಗೆ ನಾಲ್ಕು ಚಕ್ರ ವಾಹನ ಚಾಲನೆ ಪರವಾನಗಿ ನೀಡಿತ್ತು. ಮೃತರ ಪತ್ನಿ 98ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಮೈಕಲ್ ಅವರ ತಾಯಿ ಕೂಡ 108 ವರ್ಷ ಕಾಲ ಬದುಕಿದ್ದರು. ಮಂಗಳೂರಿನ ಚರ್ಚ್‌ನಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ