ಸಂಕ್ರಾಂತಿ ಬಳಿಕ ಶ್ರೀ ರಾಮ ಮಂದಿರದ ನಿರ್ಮಾಣ ಕಾಮಗಾರಿಗಳಿಗೆ ವೇಗ ಸಿಗಲಿದೆ: ಉಡುಪಿ ಪೇಜಾವರ ಶ್ರೀ - Mahanayaka
3:41 PM Saturday 13 - September 2025

ಸಂಕ್ರಾಂತಿ ಬಳಿಕ ಶ್ರೀ ರಾಮ ಮಂದಿರದ ನಿರ್ಮಾಣ ಕಾಮಗಾರಿಗಳಿಗೆ ವೇಗ ಸಿಗಲಿದೆ: ಉಡುಪಿ ಪೇಜಾವರ ಶ್ರೀ

pejawar shree
23/09/2022

ಬೆಳ್ತಂಗಡಿ: ದೇಶದ ಸಮಸ್ತ ಜನರ ಬಹು ನಿರೀಕ್ಷೆಯ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯ ಸಂಕ್ರಾಂತಿ ಬಳಿಕ ಬಹುತೇಕ‌ ಕಾಮಗಾರಿಗಳಿಗೆ ವೇಗ ಸಿಗಲಿದೆ. ಕಂಬಗಳನ್ನು ನಿಲ್ಲಿಸುವ ಕಾರ್ಯ ಸಾಗುತ್ತಿದೆ  ದೇವರನ್ನು ಕುಳ್ಳಿರಿಸುವ ಪೀಠದವರೆಗಿನ ಕಾರ್ಯ ಮುಗಿದಿದೆ ಎಂದು ಉಡುಪಿ ಪೇಜಾವರ ಶ್ರೀಗಳು  ಹೇಳಿದರು.


Provided by

ಧರ್ಮಸ್ಥಳದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಾಲರಾಮ ದೇವರ ಮೂರುತಿಯನ್ನು ಅಮೃತಶಿಲೆಯಿಂದ ನಿರ್ಮಿಸುವ ವಿಚಾರ ಮುಂದಿದ್ದು, ನೀಲಿ ವರ್ಣವೂ ಅದರಲ್ಲಿ ಒಳಗೊಳ್ಳಲಿದೆ. ಇದನ್ನು ಈಗಾಗಲೇ ಸಭೆಯಲ್ಲಿ ನಿರ್ಣಯಿಸಲಾಗಿದೆ. ಇದಕ್ಕೆ ಬೇಕಾದ ಶಿಲೆಯ ಶೋಧ ನಡೆಯುತ್ತಿದೆ ಎಂದರು.

ಉಗ್ರ ಚಟುವಟಿಕೆಗಳ  ಸಂಬಂಧ ಪ್ರತಿಕ್ರಿಯಿಸಿದ ಶ್ರೀಗಳು, ಶಿವಮೊಗ್ಗ ಹಾಗೂ ಕರಾವಳಿ ಭಾಗದಲ್ಲಿ ಉಗ್ರರ ಸಂಚು ಪತ್ತೆಯಾಗಿದೆ. ಇದನ್ನು ಈ ಮೊದಲೇ ಮಟ್ಟ ಹಾಕಬೇಕಿತ್ತು. ಕೇಂದ್ರ, ರಾಜ್ಯ ಸರಕಾರಗಳು ಈಗಾಗಲೇ ಬಂಧಿಸಿದವರನ್ನು ತೀವ್ರ ವಿಚಾರಣೆ ನಡೆಸಿ, ಇದರ ಮೂಲವನ್ನು ಬೇರು ಸಹಿತ ಕಿತ್ತೊಗೆಯಬೇಕು. ಈ ವಿಚಾರಗಳಿಗೆ ಕೋಮು‌ ಬಣ್ಣಹಚ್ಚುವ ಷಡ್ಯಂತ್ರ ನಡೆಯುತ್ತಿದ್ದು ಇದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದು. ದೇಶದಲ್ಲಿ ಸದಾ ಶಾಂತಿ ಸುವ್ಯವಸ್ಥೆ ಇರಬೇಕು ಎಂಬುದೇ ನಮ್ಮ ಆಶಯವಾಗಿದೆ. ಕೇಂದ್ರ ಸರಕಾರ ಶೀಘ್ರವಾಗಿ ಉಗ್ರಚಟುವಟಿಕೆಗಳಿಗೆ ಅಂತ್ಯ ಹಾಡಬೇಕು ಅದಕ್ಕೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ