ದುರ್ಗಾ ದೌಡ್ ಕಾರ್ಯಕ್ರಮದ ಭವ್ಯ ಮೆರವಣಿಗೆಗೆ ಅದ್ಧೂರಿ ಚಾಲನೆ - Mahanayaka
11:17 PM Saturday 13 - September 2025

ದುರ್ಗಾ ದೌಡ್ ಕಾರ್ಯಕ್ರಮದ ಭವ್ಯ ಮೆರವಣಿಗೆಗೆ ಅದ್ಧೂರಿ ಚಾಲನೆ

durga dowd
02/10/2022

ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲೆ ಇದರ ವತಿಯಿಂದ ಹಮ್ಮಿಕೊಂಡ ದುರ್ಗಾ ದೌಡ್ ಕಾರ್ಯಕ್ರಮದ ಭವ್ಯ ಮೆರವಣಿಗೆಗೆ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಮುಂಭಾಗದಲ್ಲಿ ಇಂದು ಅದ್ಧೂರಿಯಾಗಿ ಚಾಲನೆ ನೀಡಲಾಯಿತು.


Provided by

ಕಡಿಯಾಳಿಯಿಂದ ಹೊರಟ ಮೆರವಣಿಗೆ, ಕಲ್ಸಂಕ ಜಂಕ್ಷನ್, ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಕೆಎಂ ಮಾರ್ಗ, ಡಯಾನ ಸರ್ಕಲ್ ಮಾರ್ಗವಾಗಿ ತೆಂಕಪೇಟೆ ಮೂಲಕ ಸಾಗಿ ಶ್ರೀಕೃಷ್ಣಮಠದ ಪಾರ್ಕಿಂಗ್ ಸ್ಥಳದಲ್ಲಿ ಸಮಾಪ್ತಿಗೊಂಡಿತು.

ಚಂಡೆ, ಆಂಜನೇಯ ಟ್ಯಾಬ್ಲೊ, ಶಿವಾಜಿ ವೇಷ ಹಾಗೂ ಟ್ಯಾಬ್ಲೊ, ಭಾರತ ಮಾತೆ ವೇಷಧಾರಿ, ಸಾವರ್ಕರ್ ಟ್ಯಾಬ್ಲೊ, ತಾಲೀಮು ತಂಡ, ನಾಸಿಕ್ ಬ್ಯಾಂಡ್ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿತು. ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂ‌ ಕಾರ್ಯಕರ್ತರು ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಸಚಿವ ಸುನೀಲ್ ಕುಮಾರ್ ಶಾಸಕರಾದ ರಘುಪತಿ ಭಟ್ ಬಿಜೆಪಿ ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ ಕುಯಿಲಾಡಿ ಸುರೇಶ್ ನಾಯಕ್ ಉದಯ ಕುಮಾರ್ ಶೆಟ್ಟಿ ಮಹೇಶ್ ಠಾಕೂರ್ ಮೊದಲಾದವರು ಹಾಜರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ