ಶಾಲಾ ಪ್ರವಾಸ ದುರಂತ ಅಂತ್ಯ: ಭೀಕರ ಅಪಘಾತಕ್ಕೆ 5 ವಿದ್ಯಾರ್ಥಿಗಳು ಸೇರಿ 9 ಮಂದಿ ಬಲಿ - Mahanayaka

ಶಾಲಾ ಪ್ರವಾಸ ದುರಂತ ಅಂತ್ಯ: ಭೀಕರ ಅಪಘಾತಕ್ಕೆ 5 ವಿದ್ಯಾರ್ಥಿಗಳು ಸೇರಿ 9 ಮಂದಿ ಬಲಿ

accident in kerala
06/10/2022


Provided by

ಎರ್ನಾಕುಲಂ: ಸಂಭ್ರಮದಿಂದ ಹೊರಟಿದ್ದ ಶಾಲಾ ಪ್ರವಾಸ ದುರಂತವಾಗಿ ಅಂತ್ಯಕಂಡ ಘಟನೆ  ಕೇರಳದ ಪಾಲಕ್ಕಾಡ್ ನ ವಡಕ್ಕೆಂಚೇರಿಯಲ್ಲಿ ನಡೆದಿದ್ದು,  ದುರಂತದಲ್ಲಿ ಐವರು ವಿದ್ಯಾರ್ಥಿಗಳು ಸೇರಿದಂತೆ  ಒಂಬತ್ತು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಎರ್ನಾಕುಲಂನ ಮುಳಂತುರುತಿಯ ಬಸೆಲಿಯೋಸ್ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಖಾಸಗಿ ಬಸ್ ನಲ್ಲಿ ಪ್ರವಾಸಕ್ಕೆ ತೆರಳಿದ್ದರು.  ಅಕ್ಟೋಬರ್ 5ರ ತಡರಾತ್ರಿ ಪಾಲಕ್ಕಾಡ್ ‌ನ ವಡಕ್ಕೆಂಚೇರಿಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಯ ಬಸ್ ನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕೆಎಸ್ ಆರ್ ಟಿಸಿ ಬಸ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ  9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಖಾಸಗಿ ಬಸ್ ಚಾಲಕನ ವಿಪರೀತ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಇನ್ನೂ ಕೆಎಸ್ ಆರ್ ಟಿಸಿ ಬಸ್ ನ ಚಾಲಕ ಹಾಗೂ ನಿರ್ವಾಹಕ ಹೇಳುವಂತೆ, ಖಾಸಗಿ ಬಸ್ ಚಾಲಕನ ಮಿತಿಗಿಂತ ಅಧಿಕ ವೇಗದೊಂದಿಗೆ ಬಂದಿದ್ದು, ಕೆಎಸ್ ಆರ್ ಟಿಸಿ ಬಸ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಕೆಎಸ್ ಆರ್ ಟಿ ಬಸ್ ಕೂಡ ನಿಯಂತ್ರಣ ತಪ್ಪಿದ್ದು, ಉರುಳಿ ಬೀಳುವ ಸ್ಥಿತಿಯಲ್ಲಿದ್ದ ಬಸ್ ನ್ನು ಹರಸಾಹಸದ ಪಟ್ಟು ನಿಯಂತ್ರಣಕ್ಕೆ ತಂದಿದ್ದೇವೆ. ಇಲ್ಲವಾದರೆ, ನಮ್ಮ ಬಸ್ ನಲ್ಲಿದ್ದವರಿಗೂ ಅನಾಹುತ ಸಂಭವಿಸುತ್ತಿತ್ತು ಎಂದಿದ್ದಾರೆ.

ಎರ್ನಾಕುಲಂ ನಿಂದ ಊಟಿಗೆ ಪ್ರವಾಸ ಹೊರಟಿದ್ದ 41 ವಿದ್ಯಾರ್ಥಿಗಳ ಪೈಕಿ 5 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಕೆಎಸ್ ಆರ್ ಟಿಸಿ ಬಸ್ ನಲ್ಲಿದ್ದ 3 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 9 ಮಂದಿ ಈ ಅಪಘಾತದಲ್ಲಿ ಸಾವನ್ನಪ್ಪಿದ್ದು,  12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 28 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.


“ನಾನು ಹಿಂದಿನ ಸೀಟಿನಲ್ಲಿ ಕುಳಿತಿದ್ದೆ. ಭಾರೀ ಶಬ್ದ ಕೇಳಿದ್ದು, ಆ ವೇಳೆ ಅಪಘಾತ ನಡೆದಿರೋದು ಗೊತ್ತಾಯ್ತು, ಕೊನೆಗೆ ಬಸ್ ನ ಕಿಟಕಿ ಮೂಲಕ ನಾನು ಹೊರಗೆ ಬಂದೆ”

-ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ


ಕೊಟ್ಟಾರಕರ-ಕೊಯಮತ್ತೂರು ಆಗಿ ತ್ರಿಶೂರ್ ಗೆ ಬರುವಷ್ಟರಲ್ಲಿ ನಮ್ಮ ಬಸ್ಸಿನಲ್ಲೂ ಸಾಕಷ್ಟು ಪ್ರಯಾಣಿಕರಿದ್ದರು. ಪ್ರತಿ ಬಸ್ ಸ್ಟಾಪ್ ನಲ್ಲೂ ಪ್ರಯಾಣಿಕರನ್ನು ಇಳಿಸಿ, ನಾವು ಮುಂದುವರಿದು ಹೋಗುತ್ತಿದ್ದೆವು. ವಡಕಂಚೇರಿಯಲ್ಲೂ ಜನ ಇಳಿದಿದ್ದಾರೆ. ಈ ವೇಳೆ ಅತೀ ವೇಗದೊಂದಿಗೆ ಬಂದ ಟೂರಿಸ್ಟ್ ಬಸ್ ನಮ್ಮ ಬಸ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಮನೋರಮ ನ್ಯೂಸ್ ಗೆ ಕೆಎಸ್ ಆರ್ ಟಿಸಿ ಸಿಬ್ಬಂದಿ ಘಟನೆ ಕುರಿತು ವಿವರಿಸಿದ್ದಾರೆ.

ಇನ್ನೂ ಅಪಘಾತದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರ ಮೃತದೇಹಗಳನ್ನು ಪಾಲಕ್ಕಾಡ್ ಮತ್ತು ಅಲತ್ತೂರ್ ಆಸ್ಪತ್ರೆಗಳಲ್ಲಿ ಇಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ