ಹುಡುಗಿಯ ರೀಲ್ಸ್ ಗೆ ಅಸಭ್ಯ ಕಾಮೆಂಟ್ ಮಾಡಿದ ಇಬ್ಬರು ಯುವಕರ ಬರ್ಬರ ಹತ್ಯೆ!

ದೆಹಲಿ: ಹುಡುಗಿಯೊಬ್ಬಳ್ಳ ರೀಲ್ಸ್ ಗೆ ಇನ್ ಸ್ಟಾಗ್ರಾಮ್ ನಲ್ಲಿ ಅಸಭ್ಯವಾಗಿ ಕಾಮೆಂಟ್ ಮಾಡಿದ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ದೆಹಲಿಯ ಭಾಲ್ಸ್ವಾ ಡೈರಿಯ ಮುಕಂದಪುರ ಭಾಗ 2 ಪ್ರದೇಶದ ನಿವಾಸಿಗಳಾದ ಸಾಹಿಲ್(18) ಮತ್ತು ನಿಖಿಲ್(28) ಹತ್ಯೆಗೀಡಾದವರು ಎಂದು ತಿಳಿದು ಬಂದಿದ್ದು, ರೀಲ್ಸ್ ಗೆ ಕಾಮೆಂಟ್ ಹಾಕಿದ ಬಳಿಕ ನಡೆದ ಜಗಳದಲ್ಲಿ ಇಬ್ಬರು ಯುವಕರನ್ನು ಹತ್ಯೆ ಮಾಡಲಾಗಿದೆ.
ಹುಡುಗಿಯೊಬ್ಬಳ ರೀಲ್ಸ್ ಗೆ ಹತ್ಯೆಗೀಡಾದ ಯುವಕರು ಅಸಭ್ಯವಾಗಿ ಕಾಮೆಂಟ್ ಹಾಕಿದ್ದರು. ಇದರಿಂದ ತೀವ್ರವಾಗಿ ಕೋಪಗೊಂಡ ಯುವತಿ, ಕಾಮೆಂಟ್ ಹಾಕಿದ ಯುವಕರಿಗೆ ಫೋನ್ ಕರೆ ಮಾಡಿ ತನ್ನನ್ನು ಭೇಟಿಯಾಗುವಂತೆ ಆಹ್ವಾನ ನೀಡಿದ್ದಾಳೆ.
ಯುವತಿಯ ಕರೆ ಬರುತ್ತಿದ್ದಂತೆಯೇ ಯುವತಿ ಹೇಳಿದ ಸ್ಥಳಕ್ಕೆ ಯುವಕರು ಆಗಮಿಸಿದ್ದು, ಈ ವೇಳೆ ಯುವತಿಯ ಸ್ನೇಹಿತರು ಇಬ್ಬರು ಯುವಕರಿಗೂ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕರನ್ನು ರಕ್ಷಿಸಲು ಸ್ಥಳೀಯರು ಯತ್ನಿಸಿದರೂ ಯುವಕರ ತಂಡ ಚಾಕುವಿನಿಂದ ಬೆದರಿಸಿ, ರಕ್ಷಣೆಯ ಯತ್ನಗಳನ್ನು ವಿಫಲಗೊಳಿಸಿದ್ದಾರೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka