ನಿನ್ನೆ ಎಮ್ಮೆಗೆ, ಇಂದು ಹಸುವಿಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್ ಪ್ರೆಸ್ ! - Mahanayaka
12:30 AM Thursday 21 - August 2025

ನಿನ್ನೆ ಎಮ್ಮೆಗೆ, ಇಂದು ಹಸುವಿಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್ ಪ್ರೆಸ್ !

vande bharat
07/10/2022


Provided by

ವಡೋದರಾ: ಅದ್ಯಾಕೋ ಗೊತ್ತಿಲ್ಲ ವಂದೇ ಭಾರತ್ ಎಕ್ಸ್ ಪ್ರೆಸ್  ಜಾನುವಾರುಗಳಿಗೆ ಪದೇ ಪದೇ ಡಿಕ್ಕಿ ಹೊಡೆಯುತ್ತಿದೆ. ಅಕ್ಟೋಬರ್ 6 ಅಂದ್ರೆ ನಿನ್ನೆ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದು ರೈಲಿನ ಮುಂಭಾಗ ಹಾನಿಯಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಅಕ್ಟೋಬರ್ 7ರಂದು, ಅಂದ್ರೆ ಇಂದು ಹಸುವಿಗೆ ವಂದೇ ಭಾರತ್ ಎಕ್ಸ್ ಪ್ರೆಸ್    ಗುದ್ದಿದ್ದು, ರೈಲಿನ ಮುಂಭಾಗಕ್ಕೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ.

ಮುಂಬೈನಿಂದ ಸುಮಾರು 433 ಕಿ.ಮೀ. ದೂರದಲ್ಲಿರುವ ಕಂಜಾರಿ ಮತ್ತು ಆನಂದ್ ನಿಲ್ದಾಣಗಳ ನಡುವೆ 3:49ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ರೈಲ್ವೇ ಅಧಿಕಾರಿ ಸುಮಿತ್ ಠಾಕೂರ್ ತಿಳಿಸಿದ್ದಾರೆ.

ಅಪಘಾತಕ್ಕೀಡಾದ ಹಸು ಬದುಕಿದೆಯೇ ಅನ್ನೋ ಬಗ್ಗೆ ಯಾವುದೇ ಮಾಹಿತಿಗಳು ತಕ್ಷಣಕ್ಕೆ ಲಭಿಸಿಲ್ಲ, ಗುರುವಾರ ಮುಂಬೈನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದ ವೇಳೆ ವತ್ವಾ ಮತ್ತು ಮಣಿನಗರದ ರೈಲು ನಿಲ್ದಾಣಗಳ ನಡುವೆ ನಾಲ್ಕು ಎಮ್ಮೆಗಳಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ನಾಲ್ಕು ಎಮ್ಮೆಗಳು ಸಾವನ್ನಪ್ಪಿತ್ತು.  ರೈಲಿನ ಮುಂಭಾಗಕ್ಕೆ ತೀವ್ರವಾದ ಹಾನಿಯಾಗಿತ್ತು.

ರೈಲಿನ ಮುಂಭಾಗವನ್ನು ಶುಕ್ರವಾರ ದುರಸ್ತಿ ಮಾಡಿ ರೈಲಿಗೆ ಮರಳಿ ಚಾಲನೆ ನೀಡಲಾಗಿತ್ತು. ಆದರೆ ದುರಸ್ತಿಯಾದ ದಿನವೇ ವಂದೇ ಭಾರತ್ ಎಕ್ಸ್ ಪ್ರೆಸ್ ಹಸುವಿಗೆ ಡಿಕ್ಕಿ ಹೊಡೆದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ