ಮಸೀದಿ ಅಧ್ಯಕ್ಷರ ಕೊಲೆಗೆ ಯತ್ನ - Mahanayaka
8:04 AM Wednesday 22 - October 2025

ಮಸೀದಿ ಅಧ್ಯಕ್ಷರ ಕೊಲೆಗೆ ಯತ್ನ

crime
09/10/2022

ಕಾರ್ಕಳ: ಮಸೀದಿ ಅಧ್ಯಕ್ಷರ ಕೊಲೆಗೆ ಯತ್ನಿಸಿದ ಘಟನೆ ಕಾರ್ಕಳ ತಾಲೂಕು ನಿಟ್ಟೆ ಬಳಿ ಅ.8ರಂದು ರಾತ್ರಿ ನಡೆದಿದೆ.

ನಿಟ್ಟೆ ನಿವಾಸಿ ಅಹಮದ್ ಹುಸೈನ್ ಎಂಬುವವರ ಮೇಲೆ ಕೊಲೆ ಯತ್ನ ನಡೆದಿದೆ. ಅಹಮದ್ ಹುಸೈನ್ ನಿಟ್ಟೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈದ್ ಮಿಲಾದ್ ಕಾರ್ಯಕ್ರಮದ ಪೂರ್ವಾಭಾವಿಯಾಗಿ ನಡೆಸುವ ಮಿಲಾದ್ ಪೆಸ್ಟ್ ಕಾರ್ಯಕ್ರಮ ನಡೆಸುತ್ತಿದ್ದ ಸಂದರ್ಭ ಜಮಾತಿನ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಮಹಮ್ಮದ್ ಹಾಳೆಕಟ್ಟೆ ಎಂಬಾತನು ಕಾರಿನಲ್ಲಿ ಚೂರಿ ತೆಗೆದುಕೊಂಡು ಬಂದು ಕಾರ್ಯಕ್ರಮದ ಅತಿಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಅಹಮದ್ ಹುಸೈನ್ ರವರನ್ನು ಹಾಗೂ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ನನ್ನು ತಡೆದು ನಿಲ್ಲಿಸಿ ಅಹಮದ್ ಹುಸೈನ್ ಇವರ ಬೆನ್ನಿಗೆ ಚೂರಿಯ ಹಿಡಿಯಿಂದ ಗುದ್ದಿದ್ದು, ಅಬ್ದುಲ್ ಜಬ್ಬಾರ್ ಗೆ ಹಲ್ಲೆ ಮಾಡಿದ್ದಾನೆ.

ಇದಲ್ಲದೇ  ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ