ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಹಾಸ್ಟೇಲ್‌: ಅವ್ಯವಸ್ಥೆ ಹಿನ್ನೆಲೆ ಮಾಜಿ ಶಾಸಕ ಕೆ.ವಸಂತ ಬಂಗೇರ ದಿಢೀರ್ ಭೇಟಿ - Mahanayaka

ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಹಾಸ್ಟೇಲ್‌: ಅವ್ಯವಸ್ಥೆ ಹಿನ್ನೆಲೆ ಮಾಜಿ ಶಾಸಕ ಕೆ.ವಸಂತ ಬಂಗೇರ ದಿಢೀರ್ ಭೇಟಿ

vasantha bangera
22/10/2022

ಬೆಳ್ತಂಗಡಿ: ಹೊಸಂಗಡಿಯಲ್ಲಿರುವ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಹಾಸ್ಟೇಲ್‌ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಹಾಸ್ಟೇಲಿನಲ್ಲಿ  ಶುಚಿತ್ವ ಕಾಪಾಡುವಂತೆ  ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ನೀಡುವಂತೆ ಸೂಚನೆ ನೀಡಿದರು.

ಭೇಟಿಯ ಸಂದರ್ಭದಲ್ಲಿ ಅಲ್ಲಿ ಸಂಗ್ರಹಿಸಿಡಲಾಗಿದ್ದ ಬಹುತೇಕ ಆಹಾರ ಪದಾರ್ಥಗಳು ಸಂಪೂರ್ಣ ಕೆಟ್ಟು ಹೋಗಿ ಉಪಯೋಗಕ್ಕೆ ಯೋಗ್ಯವಲ್ಲದ ರೀತಿಯಲ್ಲಿದ್ದವು ಈ ಬಗ್ಗೆ ಹಾಸ್ಟೇಲ್ ಉಸ್ತುವಾರಿ ಹಾಗೂ ಪ್ರಭಾರ ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಶಾಸಕರು ಈ ರೀತಿಯಲ್ಲಿ ಹಾಳಾದ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುವುದಿಲ್ಲವೇ ಎಂದು ಪ್ರಶ್ನಸಿ ಶುಚಿತ್ವವುಳ್ಳ ಆಹಾರ ಪದಾರ್ಥಗಳನ್ನೇ ಮಕ್ಕಳಿಗೆ ನೀಡಿ ಸ್ವಚ್ಛತೆಗೆ ಮಹತ್ವ ನೀಡುವಂತೆ ಸೂಚಿಸಿದರು. ಮಕ್ಕಳಿಗೆ ತಂದಿರಿಸಲಾಗಿದ್ದ ಅಕ್ಕಿ ಚೀಲದ ಮೇಲೆ ಹುಳಗಳು ಓಡಾಡುತ್ತಿದ್ದವು ಗೋದಿ ಹಿಟ್ಟುಂತೂ ಹುಳ ಹುಪ್ಪಡಿಗಳಿಂದ ತುಂಬಿದ್ದವು, ಹುಳಿಯಂತೂ ಕೊಳೆತೇ ಹೋಗಿದ್ದವು ಅದನ್ನೇ ಉಪಯೋಗಿಸಿ ಅಲ್ಲಿ ಆಹಾರ ತಯಾರಿಸಲಾಗುತ್ತಿದ್ದವು ಅಗತ್ಯವಿರುವಷ್ಟು ತರಕಾರಿಗಳು ಇಲ್ಲದಿರುವ ಬಗ್ಗೆ ಪ್ರಶ್ನಿಸಿದ ಮಾಜಿ ಶಾಸಕರು ಕಾರ್ಯನಿರ್ವಹಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

ಸರಬರಾಜು ಆಗುವ ಆಹಾರ ಪದಾರ್ಥಗಳ ಗುಣಮಟ್ಟವೇ ಸರಿಯಿಲ್ಲ ಎನ್ನುವ ಪ್ರಾಚಾರ್ಯರ ಹೇಳಿಕೆಗೆ ಗುಣಮಟ್ಟವನ್ನು ಪರಿಶೀಲಿಸಿಯೇ ಪಡೆದುಕೊಳ್ಳುವಂತೆ ಹಾಗೂ ಹಿರಿಯ ಅಧಿಕಾರಿಗಳಿಗೆ  ಮಾಹಿತಿ ನೀಡುವಂತೆ ತಿಳಿಸಿದರು.

ತಮ್ಮ ಶಾಲೆಯಲ್ಲಿ ಖಾಲಿಯಿರುವ ಪ್ರಾಚಾರ್ಯರು, ಹಾಸ್ಟೇಲ್ ವಾರ್ಡನ್ ಹುದ್ದೆ  ಹಾಗೂ ಹೆಚ್ಚುವರಿ ಸಿಬ್ಬಂದಿಯ ಅಗತ್ಯತೆಯ ಬಗ್ಗೆ ಶಾಸಕರಿಗೆ ತಿಳಿಸಿ ಎಂದರು.

ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ವಸಂತ ಬಂಗೇರ ಅವರು ಸ್ವಚ್ಛತೆಯ ಕೊರತೆ ಮತ್ತು ಕಳಪೆ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ ಎನ್ನುವ ವಿದ್ಯಾರ್ಥಿಗಳ ಪೋಷಕರಿಂದ ಮೌಖಿಕ ದೂರು ಬಂದ ಹಿನ್ನೆಲೆಯಲ್ಲಿ  ವಸತಿ ಶಾಲೆಗೆ ಭೇಟಿ ನೀಡಿ ಎಚ್ಚರಿಕೆ ನೀಡಿದ್ದೇನೆ  ಸರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಅವರು ಸರಿಪಡಿಸು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಬೆಳ್ತಂಗಡಿ ಸಮಾಜಕಲ್ಯಾಣ ಅಧಿಕಾರಿ ಹೇಮಚಂದ್ರ, ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ. ಧರಣೇಂದ್ರ ಕುಮಾರ್, ನ್ಯಾಯವಾದಿ ಮನೋಹರ ಇಲಂತಿಲ, ಹರಿಪ್ರಸಾದ್ ಪಿ., ಶ್ರೀಪತಿ ಉಪಾಧ್ಯಾಯ, ಸಂದೀಪ್ ನೀರಲೆ ಮತ್ತಿತರರು ಇದ್ದರು.

ಅಂದಿನ ಶಾಸಕ ವಸಂತ ಬಂಗೇರ ಅವರ ಪ್ರಯತ್ನದಿಂದ ಹೊಸಂಗಡಿಗೆ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಮಂಜೂರಾಗಿತ್ತು. 5 ಎಕ್ರೆ ಪ್ರದೇಶದಲ್ಲಿ ಸರಿಸುಮಾರು ರೂ. 18 ಕೋಟಿ ವೆಚ್ಚದಲ್ಲಿ ವಸತಿ ಶಾಲೆಯನ್ನು ನಿರ್ಮಿಸಲಾಗಿತ್ತು. 250 ಮಕ್ಕಳಿಗೆ ವಿದ್ಯಾಭ್ಯಾಸ ಪಡೆಯಲು ಅನುಕೂಲವಾಗುವಂತೆ ಶಾಲಾ ಕಟ್ಟಡ, ಬಾಲಕ ಮತ್ತು ಬಾಲಕಿಯರ ಪ್ರತ್ಯೇಕ ವಸತಿ ನಿಲಯ, ಪ್ರಾಚಾರ್ಯರ ಮತ್ತು ಸಿಬ್ಬಂದಿಗಳ ಪ್ರತ್ಯೇಕ ವಸತಿಗೃಹಗಳು ಇಲ್ಲಿದೆ. ಪ್ರಸ್ತುತ 236ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ.

ಪ್ರಾಂಶುಪಾಲರ ಕೊಠಡಿಯಲ್ಲಿ ಕೊಳೆತ ಗೋದಿ:

ಪರಿಶೀಲನೆ ನಡೆಸಿದಾಗ ಪ್ರಾಂಶುಪಾಲರ ಕೊಠಡಿಯಲ್ಲಿ ಹತ್ತಕ್ಕೂ ಹೆಚ್ಚು ಚೀಲದಲ್ಲಿ ಕೊಳೆತ ಗೋದಿಯನ್ನು ತುಂ‌ಬಿಸಿ ಇಟ್ಟಿರುವುದು ಕಂಡು ಬಂತು. ತಿಂಗಳ ಹಿಂದೆ ಬಂದ ಗೋಧಿ ಸಂಪೂರ್ಣ ಕೆಟ್ಟು ಹೋಗಿತ್ತು ಅದನ್ನು ಇಲ್ಲಿ ತಂದು ಇಟ್ಟಿದ್ದೇವೆ ಎಂದು ಅಧಿಕಾರಿಗಾರಿಗಳು ತಿಳಿಸಿದರು. ಈಬಗ್ಗೆ ಸಮಗ್ರವಾದ ತನಿಖೆ ನಡೆಸುವಂತೆ ಮಾಜಿ ಶಾಸಕರು  ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ