ದಲಿತ್ ಸೇವಾ ಸಮಿತಿ ಶಂಭೂರು -ನರಿಕೊಂಬು ಗ್ರಾಮ ಶಾಖೆ ರಚನೆ - Mahanayaka
11:07 AM Tuesday 27 - January 2026

ದಲಿತ್ ಸೇವಾ ಸಮಿತಿ ಶಂಭೂರು –ನರಿಕೊಂಬು ಗ್ರಾಮ ಶಾಖೆ ರಚನೆ

dalith seva samiti
04/11/2022

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ (ರಿ.) ವಿಟ್ಲ ಇದರ ಬಂಟ್ವಾಳ ತಾಲೂಕಿನ ಶಂಭೂರು ಮತ್ತು ನರಿಕೊಂಬು ಗ್ರಾಮ ಶಾಖೆಯನ್ನು ಗುರುವಾರ ಸಂಜೆ  ರಚಿಸಲಾಯಿತು.

ಅಧ್ಯಕ್ಷರಾಗಿ ಚಂದ್ರಹಾಸ ಕೆರೆಕೋಡಿ, ಉಪಾಧ್ಯಕ್ಷರಾಗಿ ಶ್ರೀಧರ ಕುಂದಾಯಗೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಮೋನಪ್ಪ ನಿನ್ನಿಪಡ್ಪು, ಗೌರವಧ್ಯಕ್ಷರಾಗಿ ಎಂ. ಶಿವಪ್ಪ ನಿನ್ನಿಪಡ್ಪು, ಕೋಶಾಧಿಕಾರಿಯಾಗಿ ಮೋನಪ್ಪ ಮುಗೇರಪಡ್ಪು, ಸಂಘಟನಾ ಕಾರ್ಯದರ್ಶಿಯಾಗಿ ಬಾಬು ಡಿಂಡಿಕೆರೆ ಇವರನ್ನು ಆಯ್ಕೆ ಮಾಡಲಾಯಿತು.

ಇದೇ ವೇಳೆ ಶಾಖೆಯನ್ನುದ್ದೇಶಿಸಿ ಮಾತನಾಡಿದ ಸ್ಥಾಪಕಧ್ಯಕ್ಷರಾದ ಬಿ.ಕೆ. ಸೇಸಪ್ಪ ಬೆದ್ರಕಾಡು ಮಾತನಾಡಿ, ನಮ್ಮ ಸಮುದಾಯದವರು ಗ್ರಾಮ ಗ್ರಾಮದಲ್ಲಿ ನಮ್ಮ ಸಂಘಟನೆಯನ್ನು ಸ್ಥಾಪಿಸುತ್ತಿದ್ದು,ಇದು ಇನ್ನೂ ಕೂಡ ನಮ್ಮವರ ಪರವಾಗಿ ಹೋರಾಟ ಮಾಡಲು ಇನ್ನೂ ಶಕ್ತಿ ತುಂಬುತ್ತಿದೆ. ನಿಮಗೆ ನ್ಯಾಯ ಒದಗಿಸಲು ಸದಾ ಸಿದ್ಧವೆಂದು ತಿಳಿಸಿದರು.

ನರಿಕೊಂಬು ಗ್ರಾಮ ಪಂಚಾಯತ್ ನೌಕರ ಶಿವಪ್ಪ ನಿನ್ನಿಪಡ್ಪು  ಸಂಘಟನೆಯ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿದರು. ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಯು.ವಿಟ್ಲ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಸಾದ್ ಅನಂತಾಡಿ, ಗಣೇಶ್ ಸೀಗೆಬಲ್ಲೆ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ