ರಸ್ನಾ ಸಂಸ್ಥಾಪಕ ಅರೀಜ್ ಖಂಬಟ್ಟ ಇನ್ನಿಲ್ಲ - Mahanayaka

ರಸ್ನಾ ಸಂಸ್ಥಾಪಕ ಅರೀಜ್ ಖಂಬಟ್ಟ ಇನ್ನಿಲ್ಲ

rasna founder areez khambatta
21/11/2022

ನವದೆಹಲಿ: ಜನಪ್ರಿಯ ಪಾನೀಯ ರಸ್ನಾದ ಸಂಸ್ಥಾಪಕ ಅರೀಜ್ ಪಿರೋಜ್ ಶಾ ಖಂಬಟ್ಟಾ ಅವರು ಅಹ್ಮದಾಬಾದ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕಂಪೆನಿ ಸೋಮವಾರ ಮಾಹಿತಿ ನೀಡಿದೆ.


Provided by

85 ವರ್ಷದ  ವಯಸ್ಸಿನ ಅರೀಜ್ ಪಿರೋಜ್ ಶಾ ಖಂಬಟ್ಟಾ ದೀರ್ಘಕಾಲದ ಅನಾರೋಗ್ಯದೊಂದ ಬಳಲುತ್ತಿದ್ದರು. ನವೆಂಬರ್ 19ರಂದು ಅವರು ಕೊನೆಯುಸಿರೆಳೆದಿದ್ದಾರೆ.

ಅವರು ತಮ್ಮ ಪತ್ನಿ ಪರ್ಸಿಸ್ ಮತ್ತು ಮಕ್ಕಳಾದ ಪಿರುಜ್, ಡೆಲ್ನಾ ಮತ್ತು ರುಜಾನ್, ಅವರ ಸೊಸೆ ಬಿನೈಶಾ ಮತ್ತು ಮೊಮ್ಮಕ್ಕಳಾದ ಅರ್ಜೀನ್, ಅರ್ಜಾದ್, ಅವನ್, ಅರೀಜ್, ಫಿರೋಜಾ ಮತ್ತು ಅರ್ನಾವಾಜ್ ಅವರನ್ನು ಅಗಲಿದ್ದಾರೆ.

ಸಾಧಾರಣವಾದ ವ್ಯಾಪಾರವನ್ನು ಆರಂಭಿಸಿದ್ದ ಅರೀಜ್ ಅವರು ಸುಮಾರು 60ಕ್ಕೂ ಅಧಿಕ ದೇಶಗಳಲ್ಲಿ ಅಸ್ತಿತ್ವ ಹೊಂದಿರುವ ವಿಶ್ವದ ಅತೀದೊಡ್ಡ ತಯಾರಕರಾಗಿದ್ದಾರೆ. 1970 ರ ದಶಕದಲ್ಲಿ ಅತೀ ಹೆಚ್ಚು ಜನರ ಪ್ರಿಯವಾದ ಪಾನೀಯ ಇದಾಗಿತ್ತು.  ಮಾತ್ರವಲ್ಲದೇ ಕೈಗೆಟಕುವ ದರದಲ್ಲಿ ಇದು ಭಾರತದಲ್ಲಿ ಭಾರೀ ಜನಪ್ರಿಯವಾಗಿತ್ತು. ಬಳಿಕ ವಿದೇಶದಲ್ಲೂ ಹೆಸರುವಾಸಿಯಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ