ಕಾಫಿನಾಡಲ್ಲಿ ಫಾರೆಸ್ಟ್‌ ಆಫೀಸ್ ಪುಡಿ...ಪುಡಿ: ಸರ್ಕಾರವ ವೈಫಲ್ಯ ವಿರುದ್ಧ ರೊಚ್ಚಿಗೆದ್ದ ಸಾರ್ವಜನಿಕರು - Mahanayaka

ಕಾಫಿನಾಡಲ್ಲಿ ಫಾರೆಸ್ಟ್‌ ಆಫೀಸ್ ಪುಡಿ…ಪುಡಿ: ಸರ್ಕಾರವ ವೈಫಲ್ಯ ವಿರುದ್ಧ ರೊಚ್ಚಿಗೆದ್ದ ಸಾರ್ವಜನಿಕರು

mudigere
25/11/2022


Provided by

ಚಿಕ್ಕಮಗಳೂರು:  ಆನೆ ದಾಳಿಯನ್ನು ನಿಯಂತ್ರಿಸಲಾಗದ ಅರಣ್ಯ ಇಲಾಖೆ ವಿರುದ್ಧ ನಾಗರಿಕರ ಆಕ್ರೋಶ ಕಟ್ಟೆ ಒಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಫಾರೆಸ್ಟ್‌ ಆಫೀಸ್ ಪುಡಿ…ಪುಡಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳ್ಳ ಬೇಟೆ ನಿಗ್ರಹ ಶಿಬಿರವನ್ನ ಧ್ವಂಸಗೊಳಿಸಿದ ಜನರು ಆನೆ ದಾಳಿಯನ್ನ ನಿಯಂತ್ರಿಸಲಾಗದ ಕಚೇರಿಗಳೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನೆ ದಾಳಿ ನಿಯಂತ್ರಿಸಲು ನಿಮಗೆ ಪಟಾಕಿ ಕೊಡುವ ಯೋಗ್ಯತೆ ಇಲ್ಲ,  ಆನೆ ನಿಯಂತ್ರಿಸಲು ಆಗಲ್ಲ, ನಿಮಗೆ ತಿನ್ನೋಕೆ ಸೋನಾ ಮುಸುರಿ ಅಕ್ಕಿಯೇ ಬೇಕು ಎಂದು ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಆನೆಗಳ ನಿರಂತರ ದಾಳಿಯಿಂದ ಮಲೆನಾಡಿಗರು ಕಂಗಾಲಾಗಿದ್ದಾರೆ. ಇತ್ತೀಚೆಗಷ್ಟೇ ಶಾಸಕರನ್ನು ರಸ್ತೆಯಲ್ಲಿ ಅಟ್ಟಾಡಿಸಿದ್ದರು. ಆದರೂ ಜನ ಸಮಸ್ಯೆ ಬಗ್ಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿತ್ತು. ಇದರಿಂದ ಸಾರ್ವಜನಿಕರು ಮತ್ತಷ್ಟು ಆಕ್ರೋಶಗೊಂಡಿರುವ ಸಾರ್ವಜನಿಕರ ಆಕ್ರೋಶದ ಕಟ್ಟೆ ಒಡೆದಿದೆ.

Video:

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ