ಒಂದು ದಿನದ ಅಂತರದಲ್ಲಿ ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಅಪಘಾತಕ್ಕೆ ಬಲಿ - Mahanayaka
11:54 PM Sunday 14 - September 2025

ಒಂದು ದಿನದ ಅಂತರದಲ್ಲಿ ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಅಪಘಾತಕ್ಕೆ ಬಲಿ

harshith
25/11/2022

ಬೆಳ್ತಂಗಡಿ:  ಕಾಲೇಜು ವಿದ್ಯಾರ್ಥಿಯೊಬ್ಬ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಮಡಂತ್ಯಾರಿನಲ್ಲಿ ನಡೆದಿದೆ.


Provided by

ಮಡಂತ್ಯಾರು ಸೆಕ್ರೆಡ್ ಹಾರ್ಟ್ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಕೊಡ್ಲಕ್ಕಿ ನಿವಾಸಿ ಹರೀಶ್ಚಂದ್ರ ಎಂಬವರ ಪುತ್ರ ಹರ್ಷಿತ್ (20) ಸಂಜೆ ಕಾಲೇಜು ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿರುವ ಸಂದರ್ಭ ಬಳ್ಳಮಂಜ ರಸ್ತೆಯ ಬಂಗೇರಕಟ್ಟೆ ಎಂಬಲ್ಲಿ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿದ್ದು ಈ ವೇಳೆ ಲಾರಿ ಅಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.

ತಕ್ಷಣ  ಅವರನ್ನು ಸ್ಥಳೀಯರು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.ಅಪಘಾತ ಪ್ರಕರಣ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ದಿನದಲ್ಲಿ ಒಂದೇ ಕಾಲೇಜಿನ ಇಬ್ಬರು  ವಿದ್ಯಾರ್ಥಿಗಳಿಗೆ  ಅಪಘಾತವಾಗಿ ಸಾವನ್ನಪ್ಪಿರುವ ವಿಚಾರ ಎಲ್ಲರನ್ನೂ ಚಿಂತೆಗೊಳಪಡಿಸಿದೆ. ಮಕ್ಕಳಿಗೆ ವಾಹನ ನೀಡುವಾಗ ಪೋಷಕರು ಎಚ್ಚರ ವಹಿಸಬೇಕು ಎಂಬುವುದು ಎಲ್ಲರ ಆಗ್ರಹವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ