ಸಿಸ್ಟರ್ ಅಭಯ ಹತ್ಯೆಯಲ್ಲಿ ಫಾದರ್ ಥಾಮಸ್ ಕೊಟ್ಟೂರು, ಸಿಸ್ಟರ್ ಸೆಫಿ ಅಪರಾಧಿಗಳು | 28 ವರ್ಷಗಳ ಬಳಿಕ ಸಿಬಿಐ ಕೋರ್ಟ್  ತೀರ್ಪು - Mahanayaka
3:55 AM Thursday 4 - December 2025

ಸಿಸ್ಟರ್ ಅಭಯ ಹತ್ಯೆಯಲ್ಲಿ ಫಾದರ್ ಥಾಮಸ್ ಕೊಟ್ಟೂರು, ಸಿಸ್ಟರ್ ಸೆಫಿ ಅಪರಾಧಿಗಳು | 28 ವರ್ಷಗಳ ಬಳಿಕ ಸಿಬಿಐ ಕೋರ್ಟ್  ತೀರ್ಪು

22/12/2020

ತಿರುವನಂತಪುರಂ: ಸಿಸ್ಟರ್ ಅಭಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 28 ವರ್ಷಗಳ ನಂತರ ಸಿಬಿಐ ನ್ಯಾಯಾಲಯ ತೀರ್ಪು ನೀಡಿದ್ದು, ಫಾದರ್ ಥಾಮಸ್ ಕೊಟ್ಟೂರು ಮತ್ತು ಸಿಸ್ಟರ್ ಸೆಫಿ ಅಪರಾಧಿಗಳು ಎಂದು ತೀರ್ಪು ನೀಡಿದೆ.

1992ರ ಮಾರ್ಚ್ 27ರಂದು ಕೇರಳದ ಕೊಟ್ಟಾಯಂ ಪಿಯಾಸ್ಟ್ ಟೆಂಟ್ ಕಾನ್ವೆಂಟ್‌ ನ ಬಾವಿಯಲ್ಲಿ ಅನುಮಾನಾಸ್ಪದವಾಗಿ ಸಿಸ್ಟರ್ ಅಭಯ ಅವರ ಮೃತದೇಹ ಪತ್ತೆಯಾಗಿತ್ತು.  ಸ್ಥಳೀಯ ತನಿಖಾ ಸಂಸ್ಥೆಗಳು ಈ ಪ್ರಕರಣವನ್ನು ತನಿಖೆ ನಡೆಸುವಲ್ಲಿ ವಿಫಲವಾಗಿತ್ತು. ಇದಕ್ಕೆ ಆರೋಪಿಗಳ ಪ್ರಭಾವೂ ಕಾರಣವಾಗಿತ್ತು. 1993ರಲ್ಲಿ  ಸಿಬಿಐಗೆ ಈ ಪ್ರಕರಣವನ್ನು ವಹಿಸಲಾಗಿತ್ತು.

ಸಿಸ್ಟರ್ ಅಭಯಾ ಹತ್ಯೆಗೆ ಫಾದರ್ ಥಾಮಸ್ ಕೊಟ್ಟೂರು ಮತ್ತು ಸಿಸ್ಟರ್ ಸೆಫಿ ಅವರ ನಡುವಿನ ಅನೈತಿಕ ಸಂಬಂಧ ಕಾರಣವಾಗಿತ್ತು. ಇವರ ಸಂಬಂಧದ ಬಗ್ಗೆ ಸಿಸ್ಟರ್ ಅಭಯಾಗೆ ತಿಳಿದಿತ್ತು. ತಮ್ಮ ಸಂಬಂಧ ಬಹಿರಂಗವಾದರೆ,  ತಮ್ಮ ಉನ್ನತ ವಸ್ತ್ರ ಕಳಚಿ ಧಾರ್ಮಿಕ ಅಧಿಕಾರ ಕಳೆದುಕೊಳ್ಳುವ ಭಯದಿಂದ ಸಿಸ್ಟರ್ ಅಭಯಾ ಅವರನ್ನು ಹತ್ಯೆ ಮಾಡಲಾಗಿತ್ತು.

ಇತ್ತೀಚಿನ ಸುದ್ದಿ